ಗಿಲಿಗಿಲಿಗಿಲಿಗಿಲಿ ಗಿಲಕ್ಕ್

ಗಿಲಿಗಿಲಿಗಿಲಿಗಿಲಿ ಗಿಲಕ್ಕ್
ಗಿಲಿಗಿಲಿಗಿಲಿಗಿಲಿ
ಗಿಲಕ್ಕ್ ಕಾಲು ಗೆಜ್ಜೆ
ಜಣಕ್ಕು ಕೈಯ ಬಳೆ
ಢಣಕ್ಕ್ ಢಣಕ್ಕ್ ಆ ಆ ಆ!

ಗಿಲಿಗಿಲಿಗಿಲಿ ಗಿಲಕ್ಕ್
ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ, ಗುಂಗೆದ್ದಿತೋ

ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

ಗಿಲಿಗಿಲಿಗಿಲಿ ಗಿಲಕ್ಕ್
ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ

ಆಆಆ...ಆಹಾಅಹಾ..ಓಓಓ....ಓಹೋಒಹೋ

ನೀರ ನಿನ್ನ ಕಣ್ಣ ಬಾಣ ಹಾರಿ ಬಂದು ನನ್ನ ಪ್ರಾಣ ನಿನದಾಯಿತೋ
ನೇಹ ನೆಲೆಸಾಯಿತೋ
ಆಸೆಬಳ್ಳಿ ಹೂವಬಿಟ್ಟು ರಾಶಿಜೇನು ತುಂಬಿ ಎದ್ದು ತುಳುಕಾಡಿತೋ
ನಿನ್ನ ಹುಡುಕಾಡಿತೋ
ಮೋರೆತೋರಿ ವೀರಕ್ಕ
ಮೊರೆಯ ಕೇಳಿ ಸರಕ್ಕ
ಮರುಕ ತೋರಕ್ಕೆ ಮುರುಕ ಯಾತಕೋ

ಕಣ್ಣುಗಳ ಥಳಕ್ಕು
ತನುವಿನ ಬಳಕ್ಕು
ಮನಸಿನ ಪುಲುಕ್ಕು, ರಂಗೆದ್ದಿತೋ
ನಿನ್ನ ಕಂಡು ಕರಗಿ ಜೀವ ಜುಮ್ಮೆಂದಿತೋ

ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

ಗಿಲಿಗಿಲಿಗಿಲಿ ಗಿಲಕ್ಕ್
ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ ಢಣಕ್ಕ್, ರಂಗೆದ್ದಿತೋ
ನಿನ್ನ ಕಂಡು ಹಾರಿ ಕುಣಿಯೊ ಗುಂಗೆದ್ದಿತೋ

ಆಆಆ...ಆಹಾಅಹಾ..ಓಓಓ....ಓಹೋಒಹೋ

ದಟ್ಟಕಾಡಿನಲ್ಲಿ ಬೆಳೆದ ದಿವ್ಯವಾದ ಮ¯್ಲÉ ಹೂವ
ಮುಟ್ಟಿಲ್ಲವೋ ದುಂಬಿ ಮುಟ್ಟಿಲ್ಲವೋ
ನಿನ್ನ ಬಿಟ್ಟು ಅನ್ಯರತ್ತ ಹಾರಲಿಲ್ಲ ಹೂವ ಚಿತ್ತ
ಸಟೆಯಲ್ಲವೋ ಮಾತು ಸಟೆಯಲ್ಲವೋ

ಕೊಟ್ಟು ಭಾಷೆ ಪಣಕ್ಕೆ
ಕಟ್ಟು ತಾಳಿ ಉರಕ್ಕೆ
ಪ್ರಾಣಕೆ, ಪ್ರೇಮಕೆ ನೀನೆ ನಾಯಕ
ಕಣ್ಣುಗಳ ಥಳಕ್ಕ್
ತನುವಿನ ಬಳಕ್ಕ್
ಮನಸಿನ ಪುಲುಕ್ಕ್, ರಂಗೆದ್ದಿತೋ
ನಿನ್ನ ಕಂಡು ಕರಗಿ ಜೀವ ಜುಮ್ಮೆಂದಿತೋ

ಕೋಡಿಯಂತೆ ಹರಿದು ಬಂದ ಈ ಸ್ಫೂರ್ತಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ
ಜೋಡಿಯಿದ್ದು ಆಡು ಬಾರೋ ನನ್ನೊಂದಿಗೆ

ಗಿಲಿಗಿಲಿಗಿಲಿ ಗಿಲಕ್ಕ್
ಕಾಲು ಗೆಜ್ಜೆ ಜಣಕ್ಕ್
ಕೈಯ ಬಳೆ
ಢಣಕ್ಕ್
ಜಣಕ್ಕ್
ಜಿಲಕ್ಕ್

ಚಿತ್ರ: ರತ್ನಮಂಜರಿ
ಸಾಹಿತ್ಯ: ಹುಣಸೂರು ಕೃಷ್ಣಮೂರ್ತಿ
ಸಂಗೀತ: ರಾಜನï-ನಾಗೇಂದ್ರ
ಗಾಯನ: ಎಸï.ಜಾನಕಿ

Read More
ಶ್ರೀ ಸಿದ್ಧಿ ಗಣೇಶಾಯ ನಮಃ
ಶ್ರೀ ಸಿದ್ಧಿ ವಿನಾಯಕ ವ್ರತ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ

ಕೈಲಾಸವೆಂಬ ಪಟ್ಟಣದೊಳಗೆ ಪಾರ್ವತಿ ಪರಮೇಶ್ವರರು ವಿನೋದಕ್ಕಾಗಿ ಪಗಡೆಯಾಟವನ್ನು ಆಡುತ್ತಿದ್ದರು. ಮತ್ತು ಯಾರು ಸೋಲುತ್ತಾರೆ ಎಂಬುದನ್ನು ನೋಡುವುದಕ್ಕಾಗಿ ಪಾರ್ವತಿಯು ಅನಂತವೆಂಬ ಗೊಂಬೆಯನ್ನು ಸೃಷ್ಠಿ ಮಾಡಿ, ತಾವು ಆಡುತ್ತಿರುವ ಆಟದಲ್ಲಿ ಸೋತವರು ಯಾರು ಮತ್ತು ಗೆದ್ದವರು ಯಾರು ನೋಡಿ ಹೇಳಬೇಕೆಂದು ಆಜ್ಞಾಪಿಸಿದಳು.
ಪಗಡೆ ಆಡುತ್ತಿರುವಾಗ ಪಾರ್ವತಿಯು ಗೆಲ್ಲುತ್ತಿರಲು ಪರಮೇಶ್ವರನು ಸೋಲುತ್ತಿರಲು ಆಟವೆಲ್ಲವೂ ಮುಗಿದ ನಂತರ ಪಾರ್ವತಿಯು ನಾನು ಗೆದ್ದೆನು. ನೀವು ಸೋತಿರುವಿರಿ ಎನ್ನಲು ಪರಮೇಶ್ವರನು ಪಾರ್ವತಿಗೆ ನಾನು ಗೆದ್ದಿದ್ದೇನೆ ನೀನು ಸೋತಿರುವೆ ಎಂದು ಹೇಳಿದನು.
ಅದಕ್ಕೆ ಪಾರ್ವತಿಯು ತಾನು ಆಜ್ಞೆ ಇತ್ತ ಅನಂತವೆಂಬ ಗೊಂಬೆಯನ್ನು ಕೇಳಿ ತಿಳಿಯುವುದು ಎಂದು ನಿರ್ಧರಿಸಿ, ಅನಂತವೆಂಬ ಗೊಂಬೆಗೆ ಗೆದ್ದವರು ಯಾರು? ಸೋತವರು ಯಾರು ? ನಿಜಸ್ಥಿತಿಯನ್ನು ಹೇಳು ಎಂದು ಆಜ್ಞಾಪಿಸಲು ಅದಕ್ಕೆ ಅನಂತವೆಂಬ ಗೊಂಬೆಯು ಮನಸ್ಸಿನಲ್ಲಿ ಆಲೋಚನೆ ಮಾಡುವಂತವನಾದನು.
ಅದೇನೆಂದರೆ ಲೋಕದಲ್ಲಿ ಹೆಂಗಸರು ಗೆದ್ದರೆ ಗಂಡಸರಿಗೆ ಸೋತದ್ದಕ್ಕೆ ಅಪಹಾಸ್ಯಕ್ಕೆ ಕಾರಣವಾಗುವುದೆಂದು ಬಗೆದು ಪರಮೇಶ್ವರನು ಗೆದ್ದಿದ್ದಾರೆ. ಪಾರ್ವತಿಯು ಸೋತಿದ್ದಾರೆ ಎಂದು ಸುಳ್ಳು ಹೇಳಿತು.
ಇದನ್ನು ಕೇಳಿ ಪಾರ್ವತಿಗೆ ಸಹಿಸಲಾರದಷ್ಟು ಕೋಪ ಬಂದು, ಎಲೈ ಅನಂತವೆಂಬ ಗೊಂಬೆಯೆ ಆಟದಲ್ಲಿ ಸೋತವರಿಗೆ ಸೋತಿರುವಿರೆಂದು ಹೇಳದೇ ಸುಳ್ಳು ಹೇಳಿದ್ದಕ್ಕೆ ನಿನಗೆ ಪೂರ್ಣ ಕುಷ್ಟರೋಗ ಬರಲಿ ಎಂದು ಶಾಪ ಕೊಟ್ಟಳು. ಶಾಪಗ್ರಸ್ಥನಾದ ಅನಂತವೆಂಬ ಗೊಂಬೆಯು ಕೈಲಾಸದಿಂದ ನರಳುತ್ತಾ, ಉರುಳುತ್ತಾ ನರ್ಮದಾ ನದಿಯ ದಂಡೆಗೆ ಬಂದು ಬಿದ್ದಿತು. ಅಲ್ಲಿ ದೇವಕನ್ಯೆಯರು ಮತ್ತು ನಾಗಕನ್ಯೆಯರು ಶ್ರೀ ಸಿದ್ಧಿ ಗಣೇಶನ ವ್ರತ ಮಾಡುತ್ತಿದ್ದರು.
ಅವರು ಆ ಗೊಂಬೆಯನ್ನು ನೋಡಿ ಯಾರೋ ನರಮನುಷ್ಯ ಬಂದಿದ್ದಾನೆ. ನಾವು ಮಾಡತಕ್ಕ ಪೂಜಾ ಸಾಮಾನುಗಳನ್ನು ಮತ್ತು ದಾನವನ್ನು ಮುಚ್ಚಿಟ್ಟುಕೊಳ್ಳಿರಿ ಎಂದು ತಮ್ಮಲ್ಲೇ ಮಾತನಾಡುತ್ತಿದ್ದರು. ಇದನ್ನು ಕೇಳಿ ಅನಂತವೆಂಬ ಗೊಂಬೆಯು ಇಲ್ಲಮ್ಮಾ ನಾನೂ ನಿಮ್ಮ ಹಾಗೆ ದೇವ ಮನುಷ್ಯನಿದ್ದೇನೆ. ಪಾರ್ವತಿಯ ಶಾಪದಿಂದ ಈ ರೀತಿಯಾಗಿದೆ. ಅದನ್ನು ಕೇಳಿದ ದೇವ ಕನ್ಯೆಯರಿಗೆ ಮತ್ತು ನಾಗಕನ್ಯೆಯರಿಗೆ ಕನಿಕರ ಉಂಟಾಯಿತು.
ಅನಂತವೆಂಬ ಗೊಂಬೆಯು ದೇವಕನ್ಯೆ ಮತ್ತು ನಾಗಕನ್ಯೆಯರನ್ನು ಕುರಿತು ನೀವು ಮಾಡತಕ್ಕ ವ್ರತವು ಯಾವುದು ? ಏತಕ್ಕೋಸ್ಕರ ಮಾಡುತ್ತಿರುವಿರಿ ಎಂಬುದನ್ನು ತಿಳಿಸಿರಿ. ಅದನ್ನು ಕೇಳಿ ನಾಗಕನ್ಯೆ ಮತ್ತು ದೇವಕನ್ಯೆಯರು ನಿನಗೋಸ್ಕರವಾಗಿ ಹೇಳುತ್ತೇವೆ. ಲಕ್ಷೃವಿಟ್ಟು ಕೇಳಿ ತಿಳಿದುಕೊಳ್ಳುವಂತವನಾಗು ಎಂದು ಹೇಳಿ ಆ ವ್ರತವನ್ನು ಮತ್ತು ಅದರ ಫಲಗಳನ್ನು ಹೇಳುತ್ತಾರೆ.
ಶ್ರೀ ಸಿದ್ದಿ ಗಣೇಶನು ವಿದ್ಯೆ ಇಲ್ಲದವರಿಗೆ ವಿದ್ಯೆಯನ್ನು ದಯಪಾಲಿಸುತ್ತಾನೆ. ಮನಃಶಾಂತಿಯನ್ನು ದಯಪಾಲಿಸುತ್ತಾನೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ನಾವುಗಳು ಲಗ್ನವಾಗದೇ ಇರತಕ್ಕಂತಹ ಕನ್ಯೆಯರು. ನಮಗೆ ಯೋಗ್ಯವಾದ ವರ ಬೇಕಾದ ಕಾರಣ ನಾವು ಈ ವ್ರತವನ್ನು ಮಾಡುತ್ತಿದ್ದೇವೆ.
ಇದೇ ಸಂದರ್ಭದಲ್ಲಿ ನೀನೂ ಕೂಡಾ ಈ ವ್ರತವನ್ನು ಆಚರಿಸುವಂತವನಾಗು ಅದರಿಂದ ನೀನು ಪಾರ್ವತಿಯ ಶಾಪದಿಂದ ವಿಮೋಚನೆಯಾಗುತ್ತಿ. ಇದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿ, ಶ್ರೀ ಸಿದ್ಧಿ ವಿನಾಯಕನ ವ್ರತವನ್ನು ಮಾಡುವ ವಿಧಾನವನ್ನು ಅನಂತವೆಂಬ ಗೊಂಬೆಗೆ ಹೇಳುವಂತವರಾದರು.
ಭಾದ್ರಪದ ಮಾಸದಲ್ಲಿ ಚವತಿಯ ದಿವಸ ವ್ರತಕ್ಕೆ ತಂದು. ಶ್ರೀ ಗಣೇಶನನ್ನು ಮಾಡಿ 21 ಕರಿಕೆಪತ್ರಿ, 21 ಮಂತ್ರಾಕ್ಷತೆ ಮತ್ತು 21 ಎಳೆದಾರದಿಂದ ಒಂದೇ ಮನಸ್ಸಿನಿಂದ 21 ದಿನಗಳವರೆಗೆ ವ್ರತ ಮಾಡಿ, ಸಕ್ಕರೆಯನ್ನಾಗಲಿ, ಆಕಳ ಹಾಲನ್ನಾಗಲಿ ಶ್ರೀ ಸಿದ್ಧಿ ಗಣೇಶನಿಗೆ ನೈವೇದ್ಯ ಮಾಡಬೇಕು. 21ನೇ ದಿವಸ ಆಕಳ ಹಾಲು, ಆಕಳ ಮೊಸರು, ಆಕಳ ತುಪ್ಪ, ಕಣಕ, ಬೆಲ್ಲ ಮತ್ತು ಕಡಲೇಬೇಳೆ ತಂದು 21 ಮೋದಕಗಳನ್ನ ಮಾಡಬೇಕು. ಒಂದು ಮೋದಕ ಗಣಪತಿಗೆ 10 ಮೋದಕ ಬ್ರಾಹ್ಮಣರಿಗೆ ಕೊಟ್ಟು 10 ಮೋದಕ ತಾವು ಸ್ವೀಕಾರ ಮಾಡಬೇಕು.
ಹೀಗೆ ಯಾರು ಈ ವ್ರತವನ್ನು ನಿಯಮದಂತೆ ಮಾಡುತ್ತಾರೋ ಅವರಿಗೆ ಶ್ರೀ ಸಿದ್ಧಿ ಗಣೇಶನು ಒಲಿದು ಆಯುರಾರೋಗ್ಯವನ್ನು ಕೊಟ್ಟು ರಕ್ಷಿಸುವನು. ಹೀಗೆ ಈ ವ್ರತದ ಕಥೆಯನ್ನು ಮತ್ತು ಅದರಿಂದ ಬರತಕ್ಕ ಫಲಗಳನ್ನು ಕೊಟ್ಟು ರಕ್ಷಿಸುವನು. ಹೀಗೆ ಈ ವ್ರತದ ಕಥೆಯನ್ನು ಮತ್ತು ಅದರಿಂದ ಬರತಕ್ಕ ಫಲಗಳನ್ನು ಅನಂತವೆಂಬ ಗೊಂಬೆಗೆ ದೇವಕನ್ಯೆಯರು ಮತ್ತು ನಾಗಕನ್ಯೆಯರು ಹೇಳಿದರು.
ಶ್ರೀ ಸಿದ್ಧಿ ಗಣೇಶನ ಮಹಿಮೆಯನ್ನು ಕೇಳಿ ತಾನೂ ಕೂಡ 21 ದಿವಸ ಶ್ರೀ ಸಿದ್ಧಿ ಗಣೇಶನ ವ್ರತ ಮಾಡುವದರೊಳಗಾಗಿ ಪಾರ್ವತಿಯ ಶಾಪದಿಂದ ಬಂದಿರತಕ್ಕಂತಹ ಕುಷ್ಠರೋಗ ಪೂರ್ಣ ಹೋಗಿ ಸಂಪೂರ್ಣ ದೇಹ ಬಂದಿತು. ಅವನು ಪಾರ್ವತಿಯ ಎದುರಿಗೆ ಬಂದು ನಿಂತನು.
ಇದೇನಪ್ಪ ನೀನು ಹೀಗೆ ಆದೇ ? ನಾನೆ ನಿನಗೆ ಶಾಪ ಕೊಟ್ಟಿದ್ದೆ ಅದು ಹೇಗೆ ವಿಮೋಚನೆ ಆಯಿತು. ? ಇದಕ್ಕೆ ಅನಂತನು ತಾಯಿ ಏನು ಹೇಳಲಿ ನಿನ್ನ ಶಾಪದಿಂದ ನರಳುತ್ತಾ, ಉರುಳುತ್ತಾ ನರ್ಮದಾ ನದಿಯ ದಂಡೆಗೆ ಹೋಗಿ ಬಿದ್ದೆ. ಅಲ್ಲಿ ದೇವಕನ್ಯೆಯರ ಮತ್ತು ನಾಗಕನ್ಯೆಯರು ಶ್ರೀ ಸಿದ್ದಿವಿನಾಯಕನ ವ್ರತವನ್ನು ಮಾಡುತ್ತಿದ್ದರು. ಅವರಿಂದ ನಾನು ಈ ವ್ರತವನ್ನು ಹೇಗೆ ಮಾಡಬೇಕೆಂದು ಕೇಳಿ ತಿಳಿದುಕೊಂಡೆನು.
ಈ ವ್ರತವನ್ನು 21 ದಿವಸ ಆಚರಿಸಿದೆನು. ಈ ವ್ರತದ ಪ್ರಭಾವದಿಂದ ನನ್ನ ಕುಷ್ಠರೋಗದ ದೇಹ ಹೋಗಿ ಸುವರ್ಣ ದೇಹ ಬಂದಿತು ಎಂದು ಹೇಳಿದನು. ಅದನ್ನು ಕೇಳಿ ಪಾರ್ವತಿಯು ಆ ವ್ರತವನ್ನು ಹೇಗೆ ಮಾಡಬೇಕು ? ನನಗೂ ವಿವರವಾಗಿ ಹೇಳು, ನಾನೂ ಆ ವ್ರತವನ್ನು ಮಾಡುತ್ತೇನೆ. ನನ್ನ ಮಗನಾದ ಷಣ್ಮುಖನು ದೇಶ ಸಂಚಾರಕ್ಕೆ ಹೋಗಿದ್ದಾನೆ. ಇನ್ನೂ ಬಂದಿಲ್ಲ ಎಂದಳು.
ಹೀಗೆ ಪಾರ್ವತಿಯು ಕೇಳಲು ಅದಕ್ಕೆ ಅನಂತವೆಂಬ ಗೊಂಬೆಯು ಪಾರ್ವತಿಗೆ ದೇವಕನ್ಯೆಯರಿಂದ ಕೇಳಿ ತಿಳಿದ ವ್ರತದ ಮಹಿಮೆಯನ್ನು ಮತ್ತು ಅದನ್ನು ಮಾಡುವುದರಿಂದ ಬರತಕ್ಕ ಫಲಗಳನ್ನು ಪಾರ್ವತಿಗೆ ಹೇಳುತ್ತಾನೆ. ಅನಂತವೆಂಬ ಗೊಂಬೆ ಹೇಳಿದ ಶ್ರಿ ಸಿದ್ಧಿ ಗಣೇಶನ ವ್ರತವನ್ನು ಏಕಚಿತ್ತದಿಂದ 21 ದಿನ ಪರ್ಯಂತರವಾಗಿ ಮಾಡುತ್ತಾಳೆ. 21ನೇಯ ದಿನ ಪೂಜೆ ಮುಗಿಯುವುದರೊಳಗಾಗಿ ದೇಶ ಸಂಚಾರಕ್ಕಾಗಿ ಹೋದಂತಹ ಷಣ್ಮುಖನು ಬಂದು ಪಾರ್ವತಿಯ ಎದುರಿಗೆ ನಿಲ್ಲುತ್ತಾನೆ. ಆಗ ಪಾರ್ವತಿಯು ಇದೇನಪ್ಪಾ, ನನ್ನ ಕಾರ್ಯವು ಸಿದ್ಧಿಯಾಯಿತು ಎಂದಾಗ, ಷಣ್ಮುಖನು ಅದೇನೆಂದು ಕೇಳಲು ಅದಕ್ಕೆ ಪಾರ್ವತಿಯು ನಿನ್ನ ವೃತ್ತಾಂತವನ್ನು ತಿಳಿಯುವುದಕ್ಕೋಸ್ಕರ ದೇವಕನ್ಯೆಯರು ಅನಂತವೆಂಬ ಗೊಂಬೆಗೆ ಹೇಳಿದ ಶ್ರೀ ಸಿದ್ಧಿ ಗಣೇಶನ ವ್ರತವನ್ನು ಅವನಿಂದ ಕೇಳಿ ತಿಳಿದುಕೊಂಡು ನಾನೂ 21 ದಿನದ ಆ ವ್ರತವನ್ನು ಆಚರಿಸಿದೆನು. ಆ ವ್ರತದ ಪ್ರಭಾವದಿಂದ ನೀನು ಈ ಹೊತ್ತಿಗೆ ನನ್ನ ಎದುರಿಗೆ ಬಂದು ನಿಂತಿರುವೆ ಎಂದು ಹೇಳಿದಳು.
ಅದನ್ನು ಕೇಳಿ ಷಣ್ಮುಖನಿಗೆ ಸಂತೋಷವಾಯಿತು. ತಾಯೀ, ಆ ವ್ರತವನ್ನು ಹೇಗೆ ಮಾಡಬೇಕು ? ಎಂದು ನನಗೂ ಹೇಳು, ನನ್ನ ಸ್ನೇಹಿತನೊಬ್ಬನು ಅನ್ನವಿಲ್ಲದೇ, ವಸ್ತ್ರವಿಲ್ಲದೇ ತಿರುಗಾಡುತ್ತಿದ್ದಾನೆ. ಅವನು ಇರುವ ಸ್ಥಳವು ಯಾರಿಗೂ ಗೊತ್ತಿಲ್ಲ ಎಂದು ಹೇಳಲು ಅದಕ್ಕೆ ಪಾರ್ವತಿಯು ದೇವಕನ್ಯೆಯರಿಂದ ಕೇಳಿ ತಿಳಿದುಕೊಂಡ ಅನಂತವೆಂಬ ಗೊಂಬೆಯಿಂದ ತನಗೆ ಹೇಳಲ್ಪಟ್ಟ ಶ್ರೀ ಸಿದ್ದಿ ವಿನಾಯಕನ ಮಹಿಮೆಯನ್ನು ಮತ್ತು ಮಾಡತಕ್ಕಂತಹ ಪೂಜಾ ವಿಧಾನವನ್ನು ಷಣ್ಮುಖನಿಗೆ ಹೇಳುವಂತಾಗುತ್ತಾಳೆ.
ತನ್ನ ತಾಯಿಯಿಂದ ಕೇಳಿ ತಿಳಿದ ಶ್ರೀ ಸಿದ್ಧಿ ಗಣೇಶನ ವ್ರತವನ್ನು ನಿಷ್ಠೆಯಿಂದ 21 ದಿವಸ ಆಚರಿಸುವುದರೊಳಗಾಗಿ ಆತನ ಸ್ನೇಹಿತನು ಬಂದು ಎದುರಿಗೆ ನಿಂತನು. ಆತನು ಷಣ್ಮುಖನಿಗೆ ಇದೇನು ನಿನ್ನ ಕಾರ್ಯ ಎಂದು ಕೇಳಿದನು. ಷಣ್ಮುಖನು ತನ್ನ ತಾಯಿಯಿಂದ ಕೇಳಿ ತಿಳಿದ ಶ್ರೀ ಸಿದ್ಧಿ ಗಣೇಶನ ವೃತವನ್ನು ಮತ್ತು ಮಾಡತಕ್ಕಂತಹ ಪೂಜಾ ವಿಧಾನವನ್ನು ತನ್ನ ಸ್ನೇಹಿತನಿಗೆ ಹೇಳಿದನು.
ಇದನ್ನು ಕೇಳಿದ ಆ ಸ್ನೇಹಿತನು ಶ್ರೀ ಸಿದ್ಧಿ ಗಣೇಶನ ವ್ರತ ಮಾಡಲಿಕ್ಕೆ ಗತಿ ಇಲ್ಲದಿದ್ದರಿಂದ ಚಿಂತೆ ಹಿಡಿದವನಾಗಿ ಒಂದು ಬಾವಿಯ ದಂಡೆಯ ಮೇಲೆ ಮಲಗಿಕೊಂಡನು. ಅಲ್ಲಿಯೇ ಹತ್ತಿರದಲ್ಲಿ ಅತ್ತೆ ಮತ್ತು ಸೊಸೆಯರು ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು.
ಅತ್ತೆಯು ಸೊಸೆಗೆ ತೋಟಕ್ಕೆ ಹೋಗಿ ಕಾಯಿಪಲ್ಲೆ ತೆಗೆದುಕೊಂಡು ಬಾ ಎಂದು ಹೇಳಿದಳು. ಅದಕ್ಕೆ ಸೊಸೆಯು ತೋಟದೊಳಗೆ ಏನು ಇದೆಯೆಂದು ತರಲಿ ನಮ್ಮ ತೋಟ ಒಣಗಿ ಹೋಗಿದೆ. ಬಾವಿ ಬತ್ತಿದೆ. ತೋಟದೊಳಗೆ ಯಾವ ಪದಾರ್ಥವೂ ಇಲ್ಲ ಎಂದು ಬಹಳ ದುಃಖದಿಂದ ಹೇಳಿದಳು.
ಇದನ್ನು ಕೇಳಿ ಅತ್ತೆಯು ಮನಸ್ಸಿನಲ್ಲಿಯೇ ಚಿಂತೆ ಹಿಡಿವಳಾಗಿ ಗೆಡ್ಡೆ ಗೆಣಸು ತೆಗೆದುಕೊಂಡು ಬಾರಮ್ಮ ಇವತ್ತಿನ ದಿವಸಕ್ಕಾದರೂ ಆಗಲಿ ಎಂದು ಹೇಳಿದಳು. ಆಗ ಸೊಸೆಯು ಒಂದು ಬುಟ್ಟಿಯನ್ನು ತೆಗೆದುಕೊಂಡು ತೋಟಕ್ಕೆ ಬಂದು ನೋಡುತ್ತಾಳೆ ತೋಟ ತುಂಬಿ ನಂದನವನವಾಗಿದೆ. ಬಾವಿ ತುಂಬಿ ಸೋಸಲಿಕ್ಕೆ ಹತ್ತಿದೆ. ಅವಳಿಗೆ ಆಶ್ವರ್ಯವಾಯಿತು. ತಾನು ದಾರಿ ತಪ್ಪಿ ಯಾರದೋ ತೋಟಕ್ಕೆ ಬಂದಿರುವೆನೋ ಹೇಗೆ ಎಂದು ಭ್ರಮೆಗೊಂಡು ಹಾರುತ್ತ, ಕುಣಿಯತ್ತ ಹಣ್ಣು ಹಂಪಲು, ಕಾಯಿಪಲ್ಲೆ ತೆಗೆದುಕೊಂಡು ನೀರು ಕುಡಿದು ಬೇಗನೇ ಬಾವಿಯ ದಂಡೆಗೆ ಬಂದಳು.
ಅಲ್ಲಿ ಒಬ್ಬ ಸತ್ಪುರುಷನು ಮಲಗಿದ್ದನು. ಅವನನ್ನು ಇಲ್ಲಿ ಏಕೆ ಮಲಗಿರುವಿರಿ ? ಎಂದು ಕೇಳಿದಾಗ ತನ್ನ ವೃತ್ತಾಂತವನ್ನೆಲ್ಲಾ ಹೇಳಿ ಶ್ರೀ ಸಿದ್ಧಿ ಗಣೇಶನ ವ್ರತವನ್ನು ತಾನು ಮಾಡಬೇಕೆಂದು ಮಾಡಿದ್ದು, ಹಣ ಇಲ್ಲದ್ದಕ್ಕೆ ಇಲ್ಲಿ ವಿಚಾರ ಮಾಡುತ್ತಾ ಮಲಗಿದ್ದೇನೆಂದು ಹೇಳಿದನು.
ಅದನ್ನು ಕೇಳಿ ಆ ಸೊಸೆಯು ಸಂತೋಷಗೊಂಡು ಆ ವ್ರತವನ್ನು ಹೇಗೆ ಮಾಡಬೇಕು ? ಮತ್ತು ವ್ರತವನ್ನು ಮಾಡಲಿಕ್ಕೆ ಯಾವ ಸಾಮಾನು ಬೇಕು ? ಎಂದು ಕೇಳಲು ಅದಕ್ಕೆ ಸತ್ಪುರುಷನು ಷಣ್ಮುಖನು ತನಗೆ ಹೇಳಿದ ಶ್ರೀ ಸಿದ್ದಿ ಗಣೇಶನ ಪೂಜೆ ಮಾಡಲಿಕ್ಕೆ ಹಾಲು, ಮೊಸರು, ತುಪ್ಪ, ಕಣಕ, ಬೆಲ್ಲ, ಕಡಲೇಬೇಳೆ ಮುಂತಾದ ಪದಾರ್ಥಗಳು ಬೇಕು ಎಂದು ಹೇಳಿದನು.
ಇದನ್ನು ಕೇಳಿ ತಿಳಿದುಕೊಂಡು ಆ ಸೊಸೆಯು ತನ್ನ ಮನದೊಳಗೇ ನಿಶ್ಚಯ ಮಾಡಿಕೊಂಡು ತಲೆಯ ಮೇಲೆ ಭಾರವಾದ ಬುಟ್ಟಿಯನ್ನು ಹೊತ್ತುಕೊಂಡು ಮನೆಗೆ ಬಂದು ಅತ್ತೆ ಅತ್ತೇ ಬುಟ್ಟಿ ಭಾರವಾಗಿದೆ. ಇಳಿಸಿಕೋಳ್ಳಿ ಎಂದು ಪುನಃ ಹೇಳಿದಳು.
ಅತ್ತೆಯು ಮನೆಯಿಂದ ಹೊರಗೆ ಬಂದು ನೋಡುತ್ತಾಳೆ. ಬುಟ್ಟಿ ತುಂಬ ಹಣ್ಣು ಕಾಯಿಪಲ್ಲೆ ತುಂಬಿರುತ್ತವೆ. ತನ್ನ ಕಣ್ಣುಗಳನ್ನು ತಾನೇ ನಂಬದಾದ ಸ್ಥಿತಿಯಲ್ಲಿ ಅವಳು ಬುಟ್ಟಿಯನ್ನು ತಲೆಯ ಮೇಲಿನಿಂದ ಇಳಿಸಿ, ಹೀಗೆ ಹೇಗೆ ಆಯಿತು ? ನೀನು ಇಲ್ಲಿಂದ ಹೋಗುವಾಗ ಬಾವಿ ಬರಿದಾಗಿದೆ. ತೋಟ ಒಣಗಿ ಹೋಗಿದೆ. ತೋಟದಲ್ಲಿ ಪದಾರ್ಥ ಇಲ್ಲ ಎಂದಿದ್ದೆ ಆದರೆ, ಹೀಗೆ ಹೇಗಾಯಿತು ? ನನಗೆ ಎಲ್ಲವನ್ನು ಸವಿಸ್ತಾರವಾಗಿ ಹೇಳು ಎಂದು ಕೇಳಲು, ಸೊಸೆಯು, ನಮ್ಮ ತೋಟದ ಬಾವಿಯ ಮೇಲೆ ಒಬ್ಬ ಸತ್ಪುರುಷನು ಬಂದು ಮಲಗಿದ್ದಾನೆ. ಅವನು ಶ್ರೀ ಸಿದ್ದಿ ಗಣೇಶನ ವ್ರತ ಮಾಡಬೇಕಾಗಿದೆ. ಆದರೆ, ಆ ವ್ರತವನ್ನು ಮಾಡಲು ಗತಿಯಿಲ್ಲದೇ ಚಿಂತೆಯಿಂದ ಮಲಗಿದ್ದಾನೆ. ಆತನ ಮಹಿಮೆಯಿಂದ ಇಷ್ಟೆಲ್ಲಾ ಆಗಿದೆ ಎಂದು ಹೇಳಿದಳು.
ಆಗ, ಅತ್ತೆಯು ಆ ಸತ್ಪುರುಷನನ್ನು ಕರೆದುಕೊಂಡು ಬಾ. ಅವನಿಗೆ ಶ್ರೀ ಸಿದ್ಧಿ ಗಣೇಶನ ಪೂಜೆ ಮಾಡಲಿಕ್ಕೆ ಬೇಕಾದ ಸಾಮಾನುಗಳನ್ನು ಕೊಡೋಣವೆಂದು ಒಳಗೆ ಹೋಗಿ ನೋಡುತ್ತಾಳೆ. ಹಾಲಿನ ಪಾತ್ರೆಯಲ್ಲಿ ಹಾಲು ತುಂಬಿದೆ. ತುಪ್ಪದ ಪಾತ್ರೆಯಲ್ಲಿ ತುಪ್ಪ ತುಂಬಿದೆ. ಮೊಸರಿನ ಪಾತ್ರೆಯಲ್ಲ ಮೊಸರು ತುಂಬಿದೆ ಇದನ್ನು ನೋಡಿ ಅತ್ತೆಗೆ ಪರಮಾಶ್ಚರ್ಯವಾಯಿತು.
ಸೊಸೆಯು ಆ ಸತ್ಪುರುಷನನ್ನು ಕರೆದುಕೊಂಡು ಬಂದು ಆತನಿಗೆ ಪೂಜೆ ಮಾಡಲಿಕ್ಕೆ ಬೇಕಾದ ಪದಾರ್ಥಗಳನ್ನು ಕೊಟ್ಟು ಆತನಿಂದ 21 ದಿನ ಶ್ರೀ ಸಿದ್ದಿ ಗಣೇಶನ ವ್ರತ ಮಾಡಿಸಿ ಬ್ರಾಹ್ಮಣರಿಗೆ ಮತ್ತು ಮುತ್ತೈದೆಯರಿಗೆ ಊಟಕ್ಕೆ ಹಾಕಿ ಬಹಳ ಸಂಭ್ರಮದಿಂದ ವ್ರತವನ್ನು ನೆರವೇರಿಸಿ, ಪ್ರಸಾದವನ್ನು ಸ್ವೀಕಾರ ಮಾಡಿದರು.
ಎಲ್ಲರೂ ಸಂತೋಷದಿಂದ ಮೈಮರೆತಿರಲು ಹೊರಗಡೆ ಭಜನೆ, ಓಲಗದ ಸಪ್ಪಳ ಕೇಳಿಸತೊಡಗಿತು. ಆಗ ಎಲ್ಲರೂ ಇದೇನೆಂದು ನೋಡಲು ಹೊರಗಡೆ ಬಂದರು. ಅತ್ತೆಯು ಸಂಭ್ರಮದಿಂದ ಬರತಕ್ಕ ಆ ಮೆರವಣಿಗೆಯನ್ನು ನಿರೀಕ್ಷಿಸುತ್ತಿದ್ದಾಗ ಅಲ್ಲಿ ನಿಂತ ಒಬ್ಬನನ್ನು ಅಯ್ಯಾ ಏನು ಸಮಾಚಾರ ? ಇಷ್ಟು ಜನ ಏಕೆ ಸೇರಿದ್ದಾರೆ. ? ಏತಕ್ಕೋಸ್ಕರ ಈ ಮೆರವಣಿಗೆ ನಡೆಯುತ್ತಿದೆ ? ಎಂದು ಕೇಳಲು, ಅದಕ್ಕೆ ಆ ಮನುಷ್ಯನು ಅಮ್ಮಾ ನಿಮಗೆ ಗೊತ್ತಿಲ್ಲವೇ ಈ ಊರಿನ ರಾಜನು ಕಾಲವಾಗಿರುತ್ತಾನೆ. ಆತನ ಉತ್ತರಾಧಿಕಾರಿಗಳು ಯಾರೂ ಇರುವುದಿಲ್ಲ. ಕಾರಣ ಆನೆಯ ಸೊಂಡಿಲಿನಲ್ಲಿ ಹೂವಿನ ಹಾರವನ್ನು ಕೊಟ್ಟಿರುತ್ತಾರೆ. ಆನೆಯು ಯಾರ ಕೊರಳಿಗೆ ಮಾಲೆಯನ್ನು ಹಾಕುತ್ತದೆಯೋ ಅವರನ್ನೇ ಆ ಊರಿನ ರಾಜನನ್ನಾಗಿ ಮಾಡಬೇಕೆಂದು ಮೆರವಣಿಗೆ ನಡೆಸಿದ್ದಾರೆ. ಎಂದು ಹೇಳುವಷ್ಟರಲ್ಲಿಯೇ ಮಾಲೆಯನ್ನು ಹಿಡಿದಿರತಕ್ಕಂತಹ ಆನೆಯು ಆಚೆ ಈಚೆ ನೋಡದೇ ಆ ಮನೆಯ ಎದುರಿಗೆ ಬಂದು ಷಣ್ಮುಖನ ಸ್ನೇಹಿತನ ಕೊರಳಿಗೆ ಆ ಮಾಲೆಯನ್ನು ಹಾಕಿತು.
ಎಲ್ಲರೂ ಜಯಘೋಷಣೆ ಮಾಡಲಾರಂಭಿಸಿದರು. ಮಹಾರಾಜನಿಗೆ ಜಯವಾಗಲಿ. ಇಂದಿನಿಂದ ಈತನೇ ನಮ್ಮ ಮಹಾರಾಜನೆಂದು ಜಯಘೋಷಣೆ ಮಾಡುತ್ತಾ ಆತನನ್ನು ಅಂಬಾರಿಯ ಮೇಲೆ ಕೂಡ್ರಿಸಿಕೊಂಡು ಮೆರವಣಿಗೆ ಮೂಲಕ ರಾಜಭವನಕ್ಕೆ ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂರಿಸಿ, ಪಟ್ಟಭೀಷೇಕವನ್ನು ಮಾಡಿ, ರಾಣಿಯನ್ನು ತಂದು ಲಗ್ನ ಮಾಡಿದರು.
ರಾಜ ಮತ್ತು ರಾಣಿಯನ್ನು ಮುಕ್ತ ಕಂಠದಿಂದ ಹೊಗಳುತ್ತಾ ರಾಜನಿಂದ ಸಂಭಾವನೆಗಳನ್ನು ಸ್ವೀಕರಿಸಿ, ತಮ್ಮ ತಮ್ಮ ಮನೆಗಳಿಗೆ ತೆರಳುವಂತಾದರು.
ಇತ್ತ ರಾಜನು ರಾಣಿಗೆ ಹೇ ರಾಣಿಯೇ ಕೇಳು, ನಾನು ಈ ಹಿಂದೆ ಶ್ರೀ ಸಿದ್ಧಿ ಗಣೇಶನ ವ್ರತ ಮಾಡಿದ್ದರಿಂದ ನನಗೆ ಇಂತಹ ಪದವಿಯು ಬಂದಿರುತ್ತದೆ. ಆದ್ದರಿಂದ ನೀನೂ ಕೂಡ ಈ ವ್ರತವನ್ನು ಮಾಡುವವಳಾಗು ಎನ್ನಲು ಅದಕ್ಕೆ ರಾಣಿಯುಎಂದು ಉಲ್ಲಂಘನೆ ಮಾಡಿದಳು.
ಅದಕ್ಕೆ ರಾಜನು ನಿನ್ನ ಇಷ್ಟ ಬಂದ ಹಾಗೆಯೇ ಮಾಡಿಕೋ ಎಂದು ಹೇಳಿ ಅಲ್ಲಿ ನಿಲ್ಲದೇ ಹೊರಟು ಹೋದನು. ಅದೇ ದಿನ ರಾತ್ರಿ ರಾಜನ ಕನಸಿನಲ್ಲಿ ಶ್ರೀ ಸಿದ್ಧಿ ಗಣೇಶನು ಕಾಣಿಸಿಕೊಂಡು ಹೇ ರಾಜನೇ ! ನಿನಗೆ ರಾಣಿ ಬೇಕೋ, ರಾಜ್ಯ ಬೇಕೋ ? ಎಂದು ಕೇಳಲು, ರಾಜನು ಹೇ ಸ್ವಾಮಿ ನನಗೆ ರಾಜ್ಯ ಬೇಕು, ರಾಣಿ ಬೇಕಿಲ್ಲ ಎಂದನು.
ಅದಕ್ಕೆ ಶ್ರೀ ಸಿದ್ಧಿ ಗಣೇಶನು ಹಾಗಾದರೆ ನಿನ್ನ ರಾಣಿಯನ್ನು ಕಣ್ಣು ಕಟ್ಟಿ ಅಡವಿಯಲ್ಲಿ ಬಿಟ್ಟು ಬಾ ಎಂದನು. ಅದಕ್ಕೆ ರಾಜನು ಹೇಗೆ ಬಿಟ್ಟು ಬರಲಿ ? ಎಂದು ಕೇಳಿದನು.
ಆಗ ಸಿದ್ಧಿ ವಿನಾಯಕನು ನಾಳೆ ವನಭೋಜನಕ್ಕೆಂದು ಹೇಳಿ ಬಂಧು, ಜನರನ್ನು ಕರೆದುಕೊಂಡು ಹೋಗು, ಆಗ ಎಲ್ಲರದೂ ಊಟವಾದ ಮೇಲೆ ರಾಣಿಗೆ ನಿದ್ದೆ ಬರುತ್ತದೆ. ಆಗ ಅವಳನ್ನು ಅಲ್ಲಿಯೇ ಬಿಟ್ಟು ಬಾ ಎಂದು ಹೇಳಿ ಅಂತರ್ಧಾನನಾದನು.
ಮರುದಿನ ರಾಜನು ವನಭೋಜನಕ್ಕೆಂದು ತನ್ನ ರಾಣಿ ಹಾಗೂ ಪರಿವಾರ ಸಮೇತ ಅಡವಿಗೆ ಬಂದನು. ಎಲ್ಲರೂ ಉಂಡು, ತಿಂದು ಸುಖದಿಂದ ಮಾತನಾಡುತ್ತಿರಲಿ ರಾಣಿಗೆ ಮಹತ್ತರವಾದ ನಿದ್ದೆ ಬಂದಿತು. ಆಗ ರಾಜನು ರಾಣಿಯನ್ನು ಅಲ್ಲಿಯೇ ಬಿಟ್ಟು ಹೋಗುವಾಗ ಆತನಿಗೆ ಎಲ್ಲಿಲ್ಲದ ದುಃಖವು ಪ್ರಾಪ್ತವಾಯಿತು.
ಹತ್ತು ಹೆಜ್ಜೆ ಮುಂದೆ, ಹತ್ತು ಹೆಜ್ಜೆ ಹಿಂದೆ ತಿರುಗಿ ಗಿರುಗಿ ನೋಡುತ್ತಾ ಭಾರವಾದ ಮನಸ್ಸಿನಿಂದ ತನ್ನ ರಾಜ್ಯವನ್ನು ತಲುಪಿದನು. ಇತ್ತ ರಾಣಿಯು ನಿದ್ದೆಯಿಂದ ಎದ್ದು, ನೋಡಲಾಗಿ ತನ್ನ ಜೊತೆಗೆ ಬಂದಿರತಕ್ಕಂತಹ ರಾಜನಾಗಲೀ, ಪರಿವಾರವಾಗಲೀ ಕಾಣದ್ದರಿಂದ ಗಾಬರಿಗೊಳಗಾಗಿ ಅಳಲು ಪ್ರಾರಂಭಿಸಿದಳು.
ಅಲ್ಲಿರುವ ಗಿಡ, ಮರಗಳನ್ನು, ಪಕ್ಷಿ ಹಕ್ಕಿಗಳನ್ನು ಅಂಗಲಾಚಿ ಬೇಡುವಂತವಳಾಗುತ್ತಾಳೆ. ಆಕೆ ಪತಿಯನ್ನು ಹೀನತೆಯಿಂದ ಹೇ ಸ್ವಾಮಿ ನನ್ನನ್ನು ಹೇಗೆ ಇಂಥ ದಟ್ಟ ಅರಣ್ಯದಲ್ಲಿ ಬಿಟ್ಟು ಬಿಟ್ಟಿರಿ ? ಎಂದು ಆರ್ತನಾದ ಮಾಡುತ್ತಿರುವಾಗ ಅಲ್ಲಿಯೇ ಒಬ್ಬ ಗೋಸ್ವಾಮಿಯ ಮಠವಿತ್ತು. ಅದರಲ್ಲಿ ಒಬ್ಬ ಗೋಸ್ವಾಮಿಯು ವಾಸವಾಗಿದ್ದನು.
ಆತನು ಇಂತಹ ದಟ್ಟ ಅರಣ್ಯದಲ್ಲಿ ಯಾರದೋ ಸ್ತ್ರೀ ಧ್ವನಿಯು ಕೇಳಿ ಬರುತ್ತಿದೆ ಅಲ್ಲಿ ಯಾರು ಇರಬಹುದು ? ಎಂದು ನೋಡಲಿಕ್ಕೆ ಹೊರಗೆ ಬಂದನು ಅಷ್ಟರಲ್ಲಿ ಅಲ್ಲಿ ಬರುತ್ತಿದ್ದ ರಾಣಿಯನ್ನು ಕುರಿತು ತಾಯಿ ನೀನು ಯಾರು ? ಇಲ್ಲಿ ಒಬ್ಬಳೇ ಬರಲು ಕಾರಣವೇನು ? ಎಂದು ಕೇಳಲು, ಅದಕ್ಕೆ ರಾಣಿಯು ಏನು ಹೇಳಲಿ ಪೂಜ್ಯರೇ, ನಾನು ರಾಣಿ ಇz್ದÉೀನೆ. ರಾಜನು ನನ್ನನ್ನು ಬಿಟ್ಟು ಹೋಗಿದ್ದಾನೆ. ನಾನು ಯಾವ ಅಪರಾಧವನ್ನು ಎಸಗಿರುವೆನೋ ತಿಳಿಯಲಿಲ್ಲ. ಎಂದು ಹೇಳಲು ಆ ಗೋಸ್ವಾಮಿಯು ಬಾ ಅಮ್ಮ ನನ್ನ ಮನೆಯಲ್ಲಿ ಇರು. ನನ್ನ ಮಗಳು ಹಾಗೆ ನಿನ್ನನ್ನು ಪೋಷಣೆ ಮಾಡುತ್ತೇನೆ ಎಂದು ರಾಣಿಗೆ ಸಮಾಧಾನವನ್ನು ಹೇಳಿ ತನ್ನ ಮನೆಯಲ್ಲಿ ಇರಿಸಿಕೊಂಡನು.
ಮರುದಿನ ಗೋಸ್ವಾಮಿಯು ಭಿಕ್ಷೆಗೆ ಹೋದಾಗ ದಿನ ನಿತ್ಯ ಹುಟ್ಟುವ ಭಿಕ್ಷೆಯು ಕೂಡ ಹುಟ್ಟಲಿಲ್ಲ. ನಿನಗೇನು ಹಾಕಲಿ ? ನಾನೇನು ತಿನ್ನಲಿ ? ಇದೇ ಚಿಂತೆಯಿಂದ ಮನೆಗೆ ಬಂದೆನಮ್ಮ ಎಂದು ಹೇಳುತ್ತಿರಲು ರಾಣಿಯು ಬಹಳ ದುಃಖದಿಂದ ಅಳಲು ಪ್ರಾರಂಭಿಸಿದಳು.
ಆಗ ಗೋಸ್ವಾಮಿಯು ಅಮ್ಮ ಅಳಬೇಡ, ಇದಕ್ಕೆಲ್ಲಾ ಏನು ಕಾರಣ ? ಎಂದು ತಿಳಿಯೋಣ ಸಗಣಿಯನ್ನು ತೆಗೆದುಕೊಂಡು ಬಾ. ಶಕುನವನ್ನು ನೋಡುತ್ತೇನೆ ಎನ್ನಲು ರಾಣಿಯು ಸಗಣಿಯನ್ನು ತಂದು ಕೊಡಲು ಶಕುನವನ್ನು ನೋಡಲಾಗಿ ಅಮ್ಮಾ ನೀನು ಶ್ರೀ ಸಿದ್ಧಿ ಗಣೇಶನ ಉಲ್ಲಂಘನೆ ಮಾಡಿರುತ್ತೀ. ಆದ್ದರಿಂದ ನಿನಗೆ ಇಂತಹ ದುರ್ಗತಿಯು ಪ್ರಾಪ್ತವಾಯಿತು. ನಿನ್ನ ದೆಸೆಯಿಂದ ಈ ದಿನ ನನಗೆ ದಿನನಿತ್ಯ ಹುಟ್ಟುವ ಭಿಕ್ಷೆ ಕೂಡ ಹುಟ್ಟಲಿಲ್ಲ. ಈಗಲಾದರೂ ಸಂಕಲ್ಪ ಮಾಡುವಂತವಳಾಗು ಎಂದನು.
ಇತ್ತ ರಾಜನ ಕನಸಿನಲ್ಲಿ ಶ್ರೀ ಸಿದ್ಧಿ ಗಣೇಶನು ಕಾಣಿಸಿಕೊಂಡು ರಾಣಿಯನ್ನು ಮರಳಿ ಅರಮನೆಗೆ ಕರೆದುಕೊಂಡು ಬಾ ಎನ್ನಲು ರಾಜನು ಹೇ ಸ್ವಾಮಿ ನೀನು ಆಗ ಅಡವಿಯಲ್ಲಿ ಬಿಟ್ಟು ಬಾ ಎಂದೆ, ಬಿಟ್ಟು ಬಂದೆ ಈಗ ಕರೆದುಕೊಂಡು ಬಾ ಅನ್ನುತ್ತಿ. ಹೇಗೆ ದರೆದುಕೊಂಡು ಬರಲಿ ? ಅಡವಿಯಲ್ಲಿ ಹುಲಿ-ಕರಡಿ ಏನಾದರೂ ತಿಂದು ಬಿಟ್ಟವೋ ಏನೋ, ಹೇಗೆ ಮಾಡಲಿ ? ಎಂದು ಕೇಳಲು ಅದಕ್ಕೆ ಶ್ರೀ ಸಿದ್ಧಿ ಗಣೇಶನು ಹೇ ರಾಜ ನೀನು ಯಾವ ಚಿಂತೆಯನ್ನೂ ಮಾಡಬೇಡ. ಅಡವಿಯಲ್ಲಿ ಒಂದು ಗೋಸ್ವಾಮಿಯ ಮಠವಿದೆ. ಅಲ್ಲಿ ನಿನ್ನ ರಾಣಿ ಸುಖವಾಗಿದ್ದಾಳೆ. ಕರೆದುಕೊಂಡು ಬಾ ಎಂದು ಹೇಳಿ ಅದೃಶ್ಯನಾದನು.
ಅದೇ ಪ್ರಕಾರ ರಾಜನು ನಸುಕಿನಲ್ಲಿ ತನ್ನ ಪರಿವಾರ ಸಮೇತ ರಾಣಿಯನ್ನು ಕರೆದುಕೊಂಡು ಬರಲು ಗೋ ಸ್ವಾಮಿಯು ಮಠಕ್ಕೆ ಬಂದನು. ಅಲ್ಲಿ ಗೋ ಸ್ವಾಮಿಯು ರಾಜನು ಬಂದಿದ್ದನ್ನು ಕಂಡು ತನ್ನನ್ನು ಹಿಡಿಯಲಿಕ್ಕೆ ಬಂದಿದ್ದಾನೆಂದು ತಿಳಿದು ಹೆದರಿ ಓಡಲಿಕ್ಕೆ ಪ್ರಾರಂಭಿಸಿದನು. ಅದಕ್ಕೆ ರಾಜನು ಅವನಿಗೆ ಅಭಯವನ್ನು ನೀಡಿದನು. ಆತನಿಗೆ ನನ್ನ ರಾಣಿಯನ್ನು ಕಳಿಸಿಕೊಡಪ್ಪಾ ಎಂದನು.
ಅದಕ್ಕೆ ಗೋಸ್ವಾಮಿಯು ಹೇ ರಾಜ ! ನಿನ್ನ ಹೆಂಡತಿಯನ್ನು ಇಷ್ಟು ದಿವಸ ನನ್ನ ಮನೆಯಲ್ಲಿ ನನ್ನ ಮಗಳ ಹಾಗೆ ಸಾಕಿದ್ದೇನೆ.. ನಾನು ಹೇಗೆ ಕಳಿಸಿಕೊಡಲಿ ? ಬಹಳ ದುಃಖವಾಗುತ್ತದೆ. ಉಪಾಯವಿಲ್ಲ. ಹೆಣ್ಣು ಮಕ್ಕಳು ಎಂದಾದರೂ ಗಂಡನ ಮನೆಗೆ ಹೋಗಲೇಬೇಕಲ್ಲವೇ ? ನನ್ನ ಮನೆಯಲ್ಲಿ ಹರಕು-ಮುರುಕು ಬಟ್ಟೆಯಿವೆ. ಕಟ್ಟಿಕೊಡುತ್ತೇನೆ. ನಿನ್ನ ಜೊತೆಗೆ ಕರೆದುಕೊಂಡು ಹೋಗು ಎಂದು ರಾಣಿಯನ್ನು ಬಹಳ ದುಃಖ ತುಂಬಿದ ಹೃದಯದಿಂದ ಕಳಿಸಿಕೊಟ್ಟನು.
ಗೋಸ್ವಾಮಿಯಿಂದ ಬೀಳ್ಕೊಂಡ ರಾಜನು ರಾಣಿಯ ಸಮೇತ ಬರುತ್ತಿರುವಾಗ ದಾರಿಯಲ್ಲಿ ಒಂದು ಸುಂದರವಾದ ಬಾವಿಯು ಕಾಣಲು ರಾಜನು ರಾಣಿಗೆ ನಿನ್ನ ತಂದೆ ಕೊಟ್ಟ ಬುತ್ತಿ ಗಂಟನ್ನು ಬಿಚ್ಚು ಇಬ್ಬರೂ ಕೂಡಿ ಊಟ ಮಾಡಿಕೊಂಡು ಹೋಗೋಣ ಎಂದನು.
ಅದಕ್ಕೆ ರಾಣಿಯು ಹೇ ಸ್ವಾಮಿ, ನನ್ನ ತಂದೆಗೆ ನಿಮಗೆ ಕೊಡುವ ಯೋಗ್ಯತೆ ಎಲ್ಲಿಂದ ಬರಬೇಕು ? ಎನ್ನಲು ಅದಕ್ಕೆ ಏನು ಅಭ್ಯಂತರವಿಲ್ಲ ಕೊಡು ನನಗೆ ಬಹಳ ಹಸಿವೆಯಾಗುತ್ತಿದೆ ಎಂದಾಗ ರಾಣಿಯು ಗಂಟು ಬಿಚ್ಚಿ ನೋಡುತ್ತಾಳೆ. ಹರಕು, ಮುರುಕು ಬಟ್ಟೆ ಹೋಗಿ ಪಂಚಾಮೃತವಾಗಿದೆ. ಆಗ ಎಲ್ಲರೂ ಶ್ರೀ ಸಿದ್ಧಿ ಗಣೇಶನ ಮಹಿಮೆಯನ್ನು ಕೊಂಡಾಡಿದರು.
ಅರಮನೆಗೆ ಬಂದ ನಂತರ ಶ್ರೀ ಸಿದ್ದಿ ಗಣೇಶನನ್ನು ಸಿಂಹಾಸನದ ಮೇಲೆ ಕೂರಿಸಿ, ಮುತ್ತೈದೆಯರಿಗೆ ದಾನ, ಧರ್ಮಗಳನ್ನು ಕೊಟ್ಟು ನಮ್ಮ ರಾಜ್ಯದಲ್ಲಿ ಯಾರು ಹಸಿದಿದದಾರೋ, ಮತ್ತು ಯಾರು ಬಳಲಿದ್ದಾರೋ ನೋಡಿಕೊಂಡು ಬನ್ನಿ ಎಂದು ರಾಣಿ ಹೇಳಲು ಅದಕ್ಕೆ ಮಂತ್ರಿಯು ಊರ ತುಂಬ ನೋಡಲಾಗಿ ಎಲ್ಲರೂ ಉಂಡು, ತಿಂದು  ಸುಖದಿಂದ ಇದ್ದರು. ಊರ ಹೊರಗೆ ಒಬ್ಬ ಬಡ ಬ್ರಾಹ್ಮಣನ ಹೆಂಡತಿ ಅಳುತ್ತಾ ಕುಳಿತಿದ್ದಳು. ಅಲ್ಲಿಗೆ ಮಂತ್ರಿಯು ಬಂದು ! ಅಮ್ಮಾ, ರಾಣಿಯು ಶ್ರೀ ಸಿದ್ಧಿ ಗಣೇಶನ ಪೂಜೆಯನ್ನು ಮಾಡುತ್ತಾಳೆ. ತಾವು ಬರಬೇಕೆಂದು, ಮಹಾರಾಣಿಯವರ ಅಪ್ಪಣೆಯಾಗಿದೆ ಎಂದನು.
ಅದಕ್ಕೆ ಆ ಬ್ರಾಹ್ಮಣನ ಹೆಂಡತಿಯು ಹೇಗೆ ಬರಲಿ ಮಂತ್ರಿಗಳೇ ನನ್ನ ಗಂಡನಿಗೆ ಕಾಯಿಲೆ ಜೋರಾಗಿದೆ. ಈಗಲೋ ಆಗಲೋ ಪ್ರಾಣ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದ್ದ ಏಳು ಮಕ್ಕಳೂ ಬಂದೀಖಾನೆ ಸೇರಿದ್ದಾರೆ. ಏಳು ಕೊಪ್ಪರಿಗೆ ಹೊನ್ನು ಸಮುದ್ರದಲ್ಲಿ ಬಿದ್ದಿದೆ ಎಂದಳು. ಬ್ರಾಹ್ಮಣನ ಹೆಂಡತಿಯ ದುಃಖವನ್ನು ಕೇಳಿದ ಮಂತ್ರಿಯು ತಕ್ಷಣವೇ ರಾಣಿಗೆ ಈ ವಿಷಯವನ್ನು ತಿಳಿಸಿದನು. ಇದನ್ನು ಕೇಳಿದ ರಾಣಿಯು ಆ ಬ್ರಾಹ್ಮಣನ ಹೆಂಡತಿಯ ಕೈಯಲ್ಲಿ  ಶ್ರೀ ಸಿದ್ಧಿ ಗಣೇಶನ ಪೂಜೆ ಮಾಡಲು ತಿಳಿಸಿ, ಶ್ರೀ ಸಿದ್ಧಿ ಗಣೇಶನ ಮಂತ್ರಾಕ್ಷತೆಯನ್ನು ಅವಳ ಕೈಯಲ್ಲಿ ಹಾಕಿದಳು.
ಅವಳು ಆ ವ್ರತವನ್ನು ಮಾಡುವುದರೊಳಗಾಗಿ ಆಕೆಯ ಗಂಡನಿಗೆ ಕಾಯಿಲೆ ಕಡಿಮೆಯಾಗಿ ಶ್ರೀ ಸಿದ್ಧಿ ಗಣೇಶನ ಮಹಿಮೆಯಿಂದ ಹದಿನೆಂಟು ವರುಷ ಪ್ರಾಯದವನಾದನು. ಏಳು ಜನ ಮಕ್ಕಳು ಬಂದೀಖಾನೆ ಬಿಟ್ಟು ಬಂದರು. ಏಳು ಕೊಪ್ಪರಿಗೆ ಹೊನ್ನು ಕೈವಶವಾಯಿತು. ಹೀಗೆ ಬಡ ಬ್ರಾಹ್ಮಣನ ಸಂಸಾರ ರಾಣಿಯ ಮೂಲಕ ಚಿಗುರಿದ ನಂದನವನವಾಯಿತು.
ಈ ಕಥೆಯನ್ನು ತಪ್ಪದೇ, ರವಿವಾರ, ಮಂಗಳವಾರ, ಗುರುವಾರ ಯಾರು ಹೇಳುತ್ತಾರೋ, ಯಾರು ಕೇಳುತ್ತಾರೋ ಅವರಿಗೆ ಶ್ರೀ ಸಿದ್ಧಿ ಗಣೇಶನು ಒಲಿದು, ಅವರ ಸಂಕಲ್ಪ ಇಷ್ಟಾರ್ಥಗಳನ್ನು ಕೊಟ್ಟು ರಕ್ಷಿಸುವನು.
ಶ್ರೀ ಸಿದ್ಧಿ ಗಣೇಶಾಯ ನಮಃ
ಇತಿ ಶ್ರೀ ಸಿದ್ಧಿ ವಿನಾಯಕ ಕಥಾ ಸಂಪೂಣಂ

Read More

ಆಹಾರ ವಿಚಾರ

ಆಹಾರ ವಿಚಾರ
ನಾವು ಸೇವಿಸುವ ಆಹಾರ ಕೆಲವೊಮ್ಮೆ ವಿಷವಾಗಿ ಮಾರ್ಪಡುವುದರಿಂದ ಆರೋಗ್ಯಕ್ಕೆ ಹಾನಿಕರವಾಗುತ್ತದೆ. ಆಹಾರವನ್ನು ಸರಿಯಾಗಿ ತಯಾರಿಸದೆ ಅಥವಾ ಅದನ್ನು ಶುದ್ಧವಾಗಿ ಶೇಖರಿಸದೆ ಹೋದರೆ ಅದು ವಿಷವಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಜನರು ಅಸ್ವಸ್ಥರಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. ಹೆಚ್ಚಿನವರು ಈ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈ ಅಪಾಯದಿಂದ ನೀವು ದೂರವಿರಲು ಏನು ಮಾಡಬಹುದು?


  • ತರಕಾರಿಗಳನ್ನು ಔಷಧಿ, ಗೊಬ್ಬರ ಉಪಯೋಗಿಸಿ ಬೆಳೆಸುತ್ತಾರೆ. ಆದ್ದರಿಂದ ನೀವು ತರಕಾರಿಗಳನ್ನು ಉಪಯೋಗಿಸುವಾಗ ಅವುಗಳನ್ನು ಚೆನ್ನಾಗಿ ತೊಳೆಯಿರಿ.
  • ಆಹಾರ ತಯಾರಿಸುವ ಮುಂಚೆ ತರಕಾರಿ ಹೆಚ್ಚುವ ಮಣೆ, ಪಾತ್ರೆ, ತಟ್ಟೆ ಮತ್ತು ನಿಮ್ಮ ಕೈಗಳಿಗೆ ಸೋಪು ಹಚ್ಚಿ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
  • ಮೊಟ್ಟೆ, ಮಾಂಸ, ಮೀನನ್ನು ಇಟ್ಟ ಪಾತ್ರೆ ಅಥವಾ ಸ್ಥಳವನ್ನು ತೊಳೆದು ಶುದ್ಧ ಮಾಡಿದ ನಂತರವೇ ಆಹಾರ ಪದಾರ್ಥಗಳನ್ನು ಇಡಿ.
  • ಆಹಾರವನ್ನು ಚೆನ್ನಾಗಿ ಬೇಯಿಸಿ, ಬೇಗನೇ ಕೆಡುವಂಥ ಆಹಾರವನ್ನು ತಕ್ಷಣ ಬಳಸದೇ ಇದ್ದಲ್ಲಿ ಅದನ್ನು ಫ್ರಿಜ್ನಲ್ಲಿ ಇಡಿ. 
Read More

ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಹೆಜ್ಜೆಗಳು

ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಹೆಜ್ಜೆಗಳು
ಕಾಯಿಲೆಗೆ ಒಳಗಾಗುವುದು ಯಾರಿಗೆ ಇಷ್ಟ ಹೇಳಿ. ಕಾಯಿಲೆ ಬಂದಾಗ ಯಾವ ಕೆಲಸವನ್ನೂ ಮಾಡಲು ದೇಹ ಸ್ಪೂರ್ತಿ ನೀಡುವುದಿಲ್ಲ. ನಾವು ಎಷ್ಟೇ ಮುಂಜಾಗ್ರತೆ ವಹಿಸಿದರೂ ಕಾಯಿಲೆಗಳನ್ನು ತಡೆಗಟ್ಟಲು ಆಗುವುದಿಲ್ಲ. ಆದರೆ ನಮ್ಮ ಮುಂಜಾಗ್ರತೆಯಿಂದ ಅನೇಕ ಕಾಯಿಲೆಗಳಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು.

ಶುದ್ಧತೆ ಕಾಪಾಡಿಕೊಳ್ಳಿ
ದೇಹಕ್ಕೆ ಕಾಯಿಲೆ ಬರಬಾರದು ಎಂದರೆ ಮುಖ್ಯವಾಗಿ ನಿಗಾವಹಿಸಬೇಕಾದ ಮೊದಲ ಸಂಗತಿ ಶುದ್ಧತೆ. ನಮ್ಮ ಕೈಗಳು ಅಶುದ್ಧವಾಗಿದ್ದರೆ ರೋಗವನ್ನುಂಟು ಮಾಡುವ ಸೂಕ್ಷ್ಮಾಣು ಜೀವಿಗಳು ಜೀವಿಸಿರುತ್ತವೆ. ಕೈ ತೊಳೆಯದೆ ಮೂಗು ಅಥವಾ ಕಣ್ಣುಗಳನ್ನು ಮುಟ್ಟುವುದಾದರೆ ಸುಲಭವಾಗಿ ಶೀತ, ನೆಗಡಿ, ಜ್ವರ ಬರುತ್ತದೆ. ಈ ಅಪಾಯದಿಂದ ದೂರವಿರಬೇಕಾದರೆ ನಾವು ಆಗಿಂದಾಗ್ಗೆ ನಮ್ಮ ಕೈ ತೊಳೆದುಕೊಳ್ಳುತ್ತಾ ಇರಬೇಕು. ಈ ರೀತಿ ಶುದ್ಧತೆ ಕಾಪಾಡಿಕೊಳ್ಳುವುದರಿಂದ ನ್ಯುಮೋನಿಯ ಮತ್ತು ಭೇದಿಯಂತಹ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದು. ಈ ಕಾಯಿಲೆಗಳಿಂದಾಗಿ ಪ್ರತಿ ವರ್ಷ 5 ವರ್ಷದೊಳಗಿನ ಸುಮಾರು 20 ಲಕ್ಷ ಮಕ್ಕಳು ಸಾಯುತ್ತಿz್ದÁರೆ  ಎಂದು ಸಂಶೋಧನೆ ಹೇಳಿದೆ. ಕೈ ತೊಳೆಯುವುದು ಚಿಕ್ಕ ವಿಷಯ ಅಂತ ಅನ್ನಿಸಬಹುದು, ಆದರೆ ಅದನ್ನು ಪಾಲಿಸಿದರೆ ಎಬೋಲದಂತಹ ರೋಗಗಳನ್ನೂ ಹರಡದಂತೆ ತಡೆಯಬಹುದು.

ಶುದ್ಧ ನೀರನ್ನು ಬಳಸಿ
ಎಷ್ಟೋ ದೇಶಗಳಲ್ಲಿ ಇಂದಿಗೂ ಶುದ್ಧ ನೀರಿಗೆ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಪ್ರವಾಹ, ಬಿರುಗಾಳಿ ಸಂಭವಿಸಿದರೆ, ನೀರಿನ ಕೊಳವೆಗಳು ಒಡೆದು ಹೋದರೆ ಶುದ್ಧ ನೀರು ಕಲುಷಿತವಾಗುವ ಸಾಧ್ಯತೆಗಳಿವೆ. ನೀರನ್ನು ಶುದ್ಧ ಮೂಲದಿಂದ ಪಡೆಯದಿದ್ದರೆ ಅಥವಾ ನೀರನ್ನು ಸರಿಯಾಗಿ ಸಂಗ್ರಹಿಸಿ ಇಡದಿದ್ದರೆ ಕೀಟಾಣುಗಳು ಹುಟ್ಟಿ ರೋಗಗಳು ಕಾಲರ, ಭೇದಿ, ಟೈಫಾಯಿಡ್, ಹೆಪಟೈಟಿಸ್ ಮತ್ತು ಇತರ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇದೆ.
ನೀವು ಉಪಯೋಗಿಸುವ ನೀರು ಸುರಕ್ಷಿತ ಮೂಲದಿಂದ ಬರುತ್ತಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಕೇವಲ ಕುಡಿಯುವ ನೀರು ಮಾತ್ರವಲ್ಲ ಅಡುಗೆ ಮಾಡಲು, ಹಲ್ಲು ಉಜ್ಜಲು, ತರಕಾರಿ ಮತ್ತು ಪಾತ್ರೆ ತೊಳೆಯಲು ಉಪಯೋಗಿಸುವ ನೀರು ಶುದ್ಧವಾಗಿದೆಯಾ ಎಂದೂ ಪರೀಕ್ಷಿಸಿ. ಶುದ್ಧ ಎಂದು ಮನವರಿಕೆಯಾದ ನೀರನ್ನು ಉಪಯೋಗಿಸಿ.
ಕೊಳವೆ ನೀರು ಶುದ್ಧವಾಗಿಲ್ಲ ಎಂದು ನಿಮಗೆ ತಿಳಿದರೆ, ಆ ನೀರನ್ನು ಉಪಯೋಗಿಸುವ ಮುಂಚೆ ಚೆನ್ನಾಗಿ ಕುದಿಸಿ ಅಥವಾ ನೀರನ್ನು ರಾಸಾಯನಿಕದಿಂದ ಶುದ್ಧೀಕರಿಸಿ., ಕ್ಲೋರಿನ್ ಅಥವಾ ನೀರನ್ನು ಶುದ್ಧೀಕರಿಸುವ ಇತರ ಕೆಮಿಕಲ್‍ಗಳನ್ನು ಉಪಯೋಗಿಸುವಾಗ ಅದರ ತಯಾರಕರ ನಿರ್ದೆಶನವನ್ನು ತಪ್ಪದೇ ಪಾಲಿಸಿ.
ನಾವು ವಿನಾಕಾರಣ ಅನಗತ್ಯ ಕಾರಣಗಳಿಗಾಗಿ ಹಣ ವ್ಯಯಮಾಡುತ್ತೇವೆ. ಆದರೆ, ಆರೋಗ್ಯ ರಕ್ಷಣೆಗೆ ಉತ್ತಮ ಗುಣಮಟ್ಟದ ವಾಟರ್ ಫಿಲ್ಟರ್‍ಗಳನ್ನು ಮನೆಯಲ್ಲಿ ತಂದು ಉಪಯೋಗಿಸಿದರೆ ನಮ್ಮ ಹಾಗೂ ಕುಟುಂಬದ ಆರೋಗ್ಯವನ್ನು ರಕ್ಷಣೆ ಮಾಡಬಹುದು.

ಪೌಷ್ಟಿಕ ಆಹಾರ ಸೇವಿಸಿ
ಒಳ್ಳೆಯ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ಸೇವಿಸುವುದು ಅಗತ್ಯ. ಹಣ್ಣು, ತರಕಾರಿ ಹೆಚ್ಚು ತಿನ್ನಿ. ಆದರೆ ನೀವು ತಿನ್ನುವ ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಅಂಶ ಎಷ್ಟಿದೆ ಎಂದು ತಿಳಿದುಕೊಳ್ಳಿ. ನೀವು ಸೇವಿಸುವ ಆಹಾರ ಮಿತವಾಗಿರಲಿ. ಅಕ್ಕಿ, ಬೇಳೆಯಂತಹ ದವಸಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ.
ಮೊಟ್ಟೆ, ಮಾಂಸ ಮತ್ತು ಮೀನಿನಲ್ಲಿ ಪ್ರೋಟಿನ್ ಅಂಶ ಹೆಚ್ಚಿರುತ್ತದೆ. ಆದರೆ ಕೊಬ್ಬು ಕಡಿಮೆಯಿರುವ ಮಾಂಸವನ್ನೇ ಆಯ್ದುಕೊಳ್ಳೀ. ಅದನ್ನೂ ಹೆಚ್ಚು ತಿನ್ನಬೇಡಿ. ವಾರಕ್ಕೆ ಎರಡು-ಮೂರು ಸಾರಿ ಮೀನು ತಿಂದರೆ ಒಳ್ಳೆಯದು. ಸೊಪ್ಪು, ತರಕಾರಿಗಳಲ್ಲೂ ಹೆಚ್ಚು ಪ್ರೋಟಿನ್ಗಳು ನಮ್ಮ ದೇಹಕ್ಕೆ ಸಿಗುತ್ತವೆ..
ಸಕ್ಕರೆ, ಮೈದಾ ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗುವ ಅಪಾಯವಿದೆ. ಈ ಅಪಾಯವನ್ನು ತಪ್ಪಿಸಲು ಸಿಹಿ ಪಾನೀಯಗಳ ಬದಲು ಹೆಚ್ಚು ಶುದ್ಧ ನೀರು ಕುಡಿಯುವುದು ಉತ್ತಮ. ಸಿಹಿ ತಿಂಡಿ ತಿನಿಸುಗಳನ್ನು ತಿನ್ನುವುದಕ್ಕಿಂತ ಹಣ್ಣುಗಳನ್ನು ತಿನ್ನಿ. ಅಡುಗೆಯಲ್ಲಿ ಡಾಲ್ಡಾ, ತುಪ್ಪ ಮುಂತಾದ ಘನರೂಪದ ಕೊಬ್ಬನ್ನು ಉಪಯೋಗಿಸುವ ಬದಲು ಕೊಬ್ಬಿನಾಂಶ ಕಡಿಮೆಯಿರುವ ಎಣ್ಣೆಯನ್ನೇ ಉಪಯೋಗಿಸಿದರೆ ಉತ್ತಮ.

ವ್ಯಾಯಾಮ ಮಾಡಿ
ಪ್ರತಿಯೊಬ್ಬರಿಗೂ ವ್ಯಾಯಾಮ ಅತ್ಯಗತ್ಯ. ಆದರೆ ಇಂದು ಅನೇಕ ಜನ ವ್ಯಾಯಾಮ ಮಾಡುವುದೇ ಇಲ್ಲ. ಇಷ್ಟಕ್ಕೂ ವ್ಯಾಯಾಮ ಮಾಡುವುದರಿಂದ ಏನು ಪ್ರಯೋಜನ? ಎಂದು ನಿಮಗೆ ಅನ್ನಿಸಿದರೆ,

  • ವ್ಯಾಯಾಮದಿಂದ ದೇಹ ದಣಿವಾದರೆ ಚೆನ್ನಾಗಿ ನಿದ್ದೆ ಬರುತ್ತದೆ.
  • ಹೆಚ್ಚು ಚುರುಕಾಗಿರಬಹುದು.
  • ಮೂಳೆ ಮತ್ತು ಮಾಂಸ ಖಂಡಗಳು ಗಟ್ಟಿಮುಟ್ಟಾಗುತ್ತವೆ.
  • ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದು.
  • ಮಾನಸಿಕವಾಗಿ ಕುಗ್ಗಿಹೋಗುವ ಸಾಧ್ಯತೆ ಕಡಿಮೆಯಿರುತ್ತದೆ.
  • ಆಯಸ್ಸು ಹೆಚ್ಚುತ್ತದೆ.


ಸಾಕಷ್ಟು ನಿದ್ದೆ ಮಾಡಿ
ಎಷ್ಟು ಹೊತ್ತು ನಿದ್ದೆ ಮಾಡಬೇಕು ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಎಳೇ ಮಗು ದಿನಕ್ಕೆ 16ರಿಂದ 18 ಗಂಟೆ ನಿದ್ದೆ ಮಾಡಿದರೆ, 1ರಿಂದ 3 ವರ್ಷದ ಮಗು 14 ಗಂಟೆ ನಿದ್ದೆ ಮಾಡುತ್ತದೆ. 3ರಿಂದ 5 ವರ್ಷದ ಮಗು 11 ಅಥವಾ 12 ಗಂಟೆ ನಿದ್ದೆ ಮಾಡಬೇಕು. 6ರಿಂದ 12 ವರ್ಷದ ಮಕ್ಕಳು 10 ಗಂಟೆ, ಹದಿವಯಸ್ಕರು 9 ರಿಂದ 10 ಗಂಟೆ ಹಾಗೂ ವಯಸ್ಕರು 7 ರಿಂದ 8 ಗಂಟೆ ನಿದ್ದೆ ಮಾಡಬೇಕು.
ನಿದ್ರೆಯ ಪ್ರಯೋಜನ

  • ಬೆಳವಣಿಗೆಗೆ ಸಹಕಾರಿ
  • ಹೊಸ ವಿಷಯಗಳನ್ನು ಕಲಿಯಲು ಮತ್ತು ಅವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.
  • ದೇಹದ ಬೆಳವಣಿಗೆ ಮತ್ತು ತೂಕವನ್ನು ಸಮತೋಲನದಲ್ಲಿಡುವ ಹಾರ್ಮೊನುಗಳ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
  • ಹೃದಯ ಮತ್ತು ರಕ್ತ ನಾಳಗಳು ಸರಿಯಾಗಿ ಕೆಲಸ ಮಾಡುತ್ತವೆ.
  • ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ.
  • ಸಾಕಷ್ಟು ನಿದ್ದೆ ಮಾಡದಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ, ಖಿನ್ನತೆ, ಹೃದ್ರೋಗ, ಸಕ್ಕರೆ ಕಾಯಿಲೆ, ಮತ್ತು ಭೀಕರ ಅಪಘಾತ ನಡೆಯುವ ಸಾಧ್ಯತೆಯಿದೆ. 

ಈ ಎಲ್ಲಾ ಕಾರಣಗಳಿಂದಾಗಿ ಪ್ರತಿಯೊಬ್ಬರು ತಮಗೆ ಬೇಕಷ್ಟು ನಿದ್ದೆ ಮಾಡಿದರೆ ಅನುಕೂಲ.

Read More

ಮೂಲವ್ಯಾಧಿಗೆ ಮನೆಮದ್ದು

ಮೂಲವ್ಯಾಧಿಗೆ ಮನೆಮದ್ದು

  • ಅಂಜೂರ ಹಾಗೂ ಒಣ ದ್ರಾಕ್ಷಿಗಳನ್ನು ಚೆನ್ನಾಗಿ ತೊಳೆದು, ರಾತ್ರಿ ಒಂದು ಲೋಟ ಶುದ್ದ ಕುಡಿಯುವ ನೀರಿನಲ್ಲಿ ನೆನೆಯಿಟ್ಟು, ಬೆಳಗಿನ ಜಾವ, ಉಬ್ಬಿರುವ ಹಣ್ಣುಗಳನ್ನು ಅದೇ ನೀರಲ್ಲಿ ಕಿವುಚಿ ಸೇವಿಸಬೇಕು. ನೆನಪಿಡಿ ಇದು ಮಧುಮೇಹಿಗಳಿಗೆ ನಿಷೇಧ
  • ಮೂಲಂಗಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆಯ ತೆಳುಪದರವನ್ನು ತೆಗೆದು, ಚಿಕ್ಕದಾಗಿ ಹೆಚ್ಚಿಕೊಂಡು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿರಿ. ಅರ್ಧ ಬಟ್ಟಲಷ್ಟು ಈ ಮೂಲಂಗಿ ತಿರುಳು ರಸವನ್ನು ತೆಗೆದುಕೊಳ್ಳಿ. ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ, ಅರ್ಧ ಹೋಳು ನಿಂಬೆರಸವನ್ನು ಹಿಂಡಿರಿ. ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿ ಜಜ್ಜಿಕೊಂಡ ಹಸಿಶುಂಠಿಯನ್ನು ಒಂದು ತೆಳು ಶುಭ್ರಬಟ್ಟೆಯಲ್ಲಿಟ್ಟು ಹಿಂಡಿ, ರಸವನ್ನು ಮೇಲಿನ ಮಿಶ್ರಣಕ್ಕೆ ಸೇರಿಸಿ. ಚೆನ್ನಾಗಿ ಕಲಸಿ, ತಾಜಾ ಇರುವಾಗಲೇ ಸೇವಿಸಿರಿ.
  • ಬೀಟ್ರೂಟ್, ಗಜ್ಜರಿ, ಒಂದಂಗುಲ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಕತ್ತರಿಸಿ ನಂತರ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಂಡು ಆ ರಸ ತಾಜಾ ಇರುವಾಗಲೇ ಸೇವಿಸಿ. ಇದು ಮೂಲವ್ಯಾಧಿಯನ್ನು ಕಡಿಮೆ ಮಾಡುತ್ತದೆ, ದೇಹಕ್ಕೆ ಉತ್ತಮ ಪೋಷಕಾಂಶಗಳನ್ನೂ ನೀಡುತ್ತದೆ. 
  • ಒಂದು ಬಟ್ಟಲಲ್ಲಿ 1 ಚಿಟಿಕೆ ಸೈಂಧವ ಲವಣ ತೆಗೆದುಕೊಂಡು ಅದಕ್ಕೆ ಕಾಲು ಚಮಚ ಅಮೃತಬಳ್ಳಿಯ ಮೃದು ಚೂರ್ಣ ಹಾಕಿ, ಕಾಲು ಚಮಚ ಅಳಲೆಕಾಯಿ ಚೂರ್ಣ ಹಾಕಿ, ಇದಕ್ಕೆ ಸಿಹಿಮಜ್ಜಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ತಾಜಾ ಇರುವಾಗಲೇ ಸೇವಿಸಿ. ಬೊಜ್ಜು, ಮೂಲವ್ಯಾಧಿ ಹಾಗೂ ಅತಿಸಾರದ ನಿವಾರಣೆಗೆ ಸಹಾಯಕಾರಿ.
  • ಲೋಳೆಸರದ ತಿರುಳಿನ ರಸವನ್ನು ಮೂಲವ್ಯಾಧಿಯ
  • ಮೊಳಕೆಗೆ ಅಥವಾ ಗಾಯಕ್ಕೆ ನೇರವಾಗಿ ಹಚ್ಚಬೇಕು.
  • ಆಗ ತುರಿಕೆ, ನೋವು, ಉರಿ ಕಡಿಮೆಯಾಗಿ, ಮೂಲವ್ಯಾಧಿ ಹತೋಟಿಗೆ ಬರುತ್ತದೆ.
  • ಇಂದಿನ ಆಧುನಿಕ ಯುಗದಲ್ಲಿ ಕೆಲಸದ ಒತ್ತಡಕ್ಕೆ ಮಣಿದು ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯುವುದನ್ನೇ ಕಡಿಮೆ ಮಾಡಿದ್ದೇವೆ ಇದರಿಂದ ಅನೇಕ ಭಾದೆಗಳು ಕಾಡಲು ಆರಂಭಿಸಿವೆ. ಅದರಲ್ಲಿ ಮೂಲವ್ಯಾಧಿಯೂ ಒಂದು ಇದರಿಂದ ನಿವಾರಣೆ ಕಾಣಬೇಕಾದರೆ,  ಬೆಳಗ್ಗೆ ಎದ್ದ ಕೂಡಲೇ ಒಂದು ಲೀಟರ್‍ನಷ್ಟು ನೀರನ್ನು ಗಟಗಟನೆ ಕುಡಿಯಬೇಕು. ಹಲ್ಲುಜ್ಜುವ ಮೊದಲೇ  ಮಾಡಿದರೂ ಒಳ್ಳೆಯದು. ಇದರಿಂದ ಮೂಲವ್ಯಾಧಿ ಶಮನವಾಗುತ್ತದೆ.
  • ಬೀಟ್ರೂಟ್ ಹಾಗೂ ಪುದಿನವನ್ನು ತೆಗೆದುಕೊಳ್ಳಿ, ಬೀಟ್ರೂಟ್ ಸಿಪ್ಪೆ ತೆಗೆದು, ಚಿಕ್ಕದಾಗಿ ಕತ್ತರಿಸಿಕೊಂಡು ರುಬ್ಬಿಕೊಳ್ಳಿ. ಒಂದು ಬಟ್ಟಲಿಗೆ ಚಿಟಿಕೆ ಸೈಂಧವ ಲವಣ ಹಾಕಿಕೊಳ್ಳಿ.  1 ಚಮಚ ರುಬ್ಬಿಕೊಂಡ ಪುದಿನ ಹಾಕಿರಿ. ಸ್ವಲ್ಪ  ನೀರನ್ನು ಸೇರಿಸಿ. ಈಗ ರುಬ್ಬಿದ ಬೀಟ್ರೂಟನ್ನು 1  ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿರಿ. ನಂತರ 1  ಚಮಚ ಜೇನುತುಪ್ಪ ಸೇರಿಸಿ, ತಾಜಾ ಇರುವಾಗಲೇ ಸೇವಿಸಿ. ಇದು ದೇಹಕ್ಕೆ ನಾರಿನಂಶ,  ಕಬ್ಬಿಣಾಂಶ ನೀಡಿ ರಕ್ತಹೀನತೆಯನ್ನು  ಕಡಿಮೆ ಮಾಡುತ್ತದೆ ಹಾಗೂ ಮಲಬದ್ಧತೆ, ಮೂಲವ್ಯಾಧಿಯನ್ನು ಕಡಿಮೆ ಮಾಡುತ್ತದೆ.


Read More

ನಿದ್ರೆ ಬರುತ್ತಿಲ್ಲವೇ ? ಇಲ್ಲಿದೆ ಪರಿಹಾರ

ನಿದ್ರೆ ಬರುತ್ತಿಲ್ಲವೇ ? ಇಲ್ಲಿದೆ ಪರಿಹಾರ

  • ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದು, ಏಳುವುದು ಮಾಡಬಾರದು.
  • ನಿಮ್ಮ ಮಲಗುವ ಕೋಣೆಯಲ್ಲಿ ಕತ್ತಲಿರುವಂತೆ, ಶಬ್ದವಿಲ್ಲದೆ ಶಾಂತಿಯಿರುವಂತೆ ಮತ್ತು ತೀರಾ ಸೆಕೆಯೂ ತೀರಾ ಚಳಿಯೂ ಇಲ್ಲದಂತೆ ನೋಡಿಕೊಳ್ಳಿ.
  • ಮಲಗಿರುವಾಗ ಮೊಬೈಲ್, ಟ್ಯಾಬ್ಲೆಟ್ ನ ಉಪಯೋಗಿಸಬೇಡಿ ಅಥವಾ ಟಿ.ವಿ. ನೋಡಬೇಡಿ.
  • ನಿಮ್ಮ ಹಾಸಿಗೆಯನ್ನು ನಿಮಗೆ ಹೇಗೆ ಬೇಕೋ ಹಾಗೆ ನೀವೇ ಸಿದ್ಧಪಡಿಸಿಕೊಳ್ಳಿ.
  • ಮಲಗುವ ಸಮಯದಲ್ಲಿ ಕಾಫಿ, ಟೀ, ಮದ್ಯ ಸೇವನೆ ಅಥವಾ ಅತಿಯಾದ ಆಹಾರ ಸೇವನೆ ಬೇಡ.

ಈ ಸಲಹೆಗಳನ್ನು ಅನ್ವಯಿಸಿದ ಮೇಲೂ ನಿಮಗೆ ಇನ್ನೂ ನಿದ್ರೆ  ಸಂಬಂಧಿಸಿದ ಸಮಸ್ಯೆ ಇದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.
Read More

ನಾವು ಈ ಸಂದರ್ಭಗಳಲ್ಲಿ ಕೈಗಳನ್ನು ತೊಳೆಯಲೇಬೇಕು

ನಾವು ಈ ಸಂದರ್ಭಗಳಲ್ಲಿ ಕೈಗಳನ್ನು ತೊಳೆಯಲೇಬೇಕು

  • ಶೌಚಾಲಯಕ್ಕೆ ಹೋಗಿ ಬಂದ ನಂತರ
  • ಮಗುವಿನ ಡೈಪರ್ ಬದಲಾಯಿಸಿದ ನಂತರ ಮತ್ತು ಶೌಚಾಲಯಕ್ಕೆ ಹೋಗಲು ಮಗುವಿಗೆ ಸಹಾಯಮಾಡಿದ ನಂತರ
  • ಗಾಯಕ್ಕೆ ಔಷಧಿ ಹಚ್ಚುವ ಮುಂಚೆ ಮತ್ತು ನಂತರ
  • ಕಾಯಿಲೆ ಬಿದ್ದವರನ್ನು ಭೇಟಿಯಾಗುವ ಮುಂಚೆ ಮತ್ತು ನಂತರ
  • ಆಹಾರವನ್ನು ತಯಾರಿಸುವ, ಬಡಿಸುವ ಮತ್ತು ತಿನ್ನುವ ಮುಂಚೆ
  • ಕೆಮ್ಮಿದ, ಸೀನಿದ ಮತ್ತು ಮೂಗನ್ನು ಒರೆಸಿಕೊಂಡ ನಂತರ
  • ಪ್ರಾಣಿಯನ್ನು ಅಥವಾ ಪ್ರಾಣಿಯ ತ್ಯಾಜ್ಯವನ್ನು ಮುಟ್ಟಿದ ನಂತರ
  • ಕಸ ಎಸೆದ ನಂತರ
  • ಕೈ ತೊಳೆಯುವುದನ್ನು ಎಂದೂ ಹಗುರವಾಗಿ ಪರಿಗಣಿಸಬಾರದು. ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವ ಎಷ್ಟೋ ಜನ ತಮ್ಮ ಕೈ ತೊಳೆದುಕೊಳ್ಳುವುದೇ ಇಲ್ಲ ಅಥವಾ ಸರಿಯಾಗಿ ತೊಳೆದುಕೊಳ್ಳುವುದಿಲ್ಲ ಎಂದು ಅಧ್ಯಯನಗಳು ತೋರಿಸಿವೆ. ಹಾಗಾದರೆ ನಮ್ಮ ಕೈಯನ್ನು ಹೇಗೆ ತೊಳೆಯಬೇಕು?

ಹೇಗೆ ತೊಳೆದುಕೊಳ್ಳಬೇಕು

  • ಶುದ್ಧ ನೀರಿನಲ್ಲಿ ಕೈಯನ್ನು ಒದ್ದೆ ಮಾಡಿಕೊಂಡು ಸೋಪು ಹಚ್ಚಿರಿ. ನೊರೆ ಬರುವವರೆಗೆ ಕೈಯನ್ನು ಚೆನ್ನಾಗಿ ಉಜ್ಜಿರಿ. ಉಗುರುಗಳನ್ನು, ಹೆಬ್ಬೆರಳುಗಳನ್ನು, ಕೈ ಹಿಂಭಾಗವನ್ನು ಮತ್ತು ಬೆರಳುಗಳ ಮಧ್ಯ ಭಾಗವನ್ನೂ ಶುಚಿ ಮಾಡಿಕೊಳ್ಳಿ.
  • ಕನಿಷ್ಠ 20 ಸೆಕೆಂಡುಗಳವರೆಗೆ ನಿಮ್ಮ ಕೈಗಳನ್ನು ಉಜ್ಜುತ್ತಾ ಇರಿ.
  • ನಂತರ ಶುದ್ಧವಾದ ನೀರಿನಲ್ಲಿ ಚೆನ್ನಾಗಿ ಕೈ ತೊಳೆದುಕೊಳ್ಳಿ.
  • ಕೈಯನ್ನು ಶುದ್ಧವಾದ ಬಟ್ಟೆಯಿಂದ ಅಥವಾ ಟಿಶ್ಯೂ ಪೇಪರ್‍ನಿಂದ ಒರೆಸಿಕೊಳ್ಳಿ.
ಈ ಮೇಲಿನ ಹೆಜ್ಜೆಗಳು ಸರಳವಾದರೂ ಅವುಗಳನ್ನು ಪಾಲಿಸುವುದಾದರೆ ಕಾಯಿಲೆಗಳಿಂದ ದೂರವಿದ್ದು ನಮ್ಮ ಪ್ರಾಣವನ್ನು ಕಾಪಾಡಿಕೊಳ್ಳುತ್ತೇವೆ.

Read More

ಗೂಗಲ್ ಸಾಹಸ

ಗೂಗಲ್ ಸಾಹಸ
ಗೂಗಲ್ ಸದಾ ಸಂಶೋಧನೆಯಲ್ಲಿ  ತೊಡಗಿರುವ ಕಂಪನಿ. ತನ್ನ ಸರ್ಚ್ ಇಂಜಿನ್ ಹಾಗೂ ಇಮೇಲ್‍ಗಳನ್ನು ಒಂದಕ್ಕೊಂದು ಪೋಣಿಸುವ ಮೂಲಕ ಸರ್ಚ್ ಪ್ರಕ್ರಿಯೆಯನ್ನು ಗೂಗಲ್ ಮತ್ತಷ್ಟು ಸುಧಾರಿಸಿದೆ. ಯುಟ್ಯೂಬ್‍ನ ಮ್ಯೂಸಿಕ್, ಮೂವೀಸ್ ನಂಥ ಚಾನಲ್ ಗಳನ್ನು ಜನಪ್ರಿಯ ಗೊಳಿಸುವ ಪ್ರಯತ್ನವೂ ನಡೆ ಯಿತು. ಆದರೆ ಇವುಗಳೆಲ್ಲ ಕಂಪನಿ ಆದಾಯ ವೃದ್ದಿಗೆ ಹೆಚ್ಚು ಸಹಾಯಕವೇ  ಹೊರತು ಬಳಕೆದಾರನ ದೃಷ್ಟಿಯಲ್ಲಿ ವಿಶೇಷ ಬದಲಾವಣೆ ತರಲಿಲ್ಲ.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಮೂಲಕ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ ಕ್ಷೇತ್ರದಲ್ಲಿ ಗೂಗಲ್ ಹೊಸ ಆಂಡ್ರಾಯ್ಡ್ ಒಎಸ್ ಜೆಲ್ಲಿ ಬೀನ್ ಬಿಡುಗಡೆ.

1)ಏಸರ್ ನೊಂದಿಗೆ ಹೊಂದಾಣಿಕೆ ಮೂಲಕ ನೆಕ್ಸಸ್ ಟ್ಯಾಬ್ ಬಿಡುಗಡೆ.

2)ಮ್ಯಾಪ್ ಅಪ್ಲಿಕೇಷನ್‍ನಲ್ಲಿ ಕ್ಷಣಕ್ಷಣದ ಟ್ರಾಫಿಕ್ ಮಾಹಿತಿ ದಾಖಲೀಕರಣಕ್ಕೆ ಭಾರತದ ಪ್ರಮುಖ ನಗರಗಳ ಸೇರ್ಪಡೆ.

3)ಆ್ಯಪಲ್‍ನ ನಿರ್ಧಾರದಿಂದ ಐಒಎಸ್6 ನಿಂದ ಯುಟ್ಯೂಬ್ ಹಾಗೂ ಗೂಗಲ್ ಮ್ಯಾಪ್ಸ್ ಹೊರಕ್ಕೆ, ಇತ್ತೀಚೆಗೆ ಮತ್ತೆ ಸೇರ್ಪಡೆ.
Read More

ಟೈಫಾಯಿಡ್ ಎಂದರೇನು ?

ಟೈಫಾಯಿಡ್ ಎಂದರೇನು ?
ಸಾಂಕ್ರಾಮಿಕ ರೋಗವಾದ ಟೈಫಾಯಿಡ್ಗೆ ವಿಷಮಶೀತಜ್ವರ ಎಂದೂ ಕರೆಯುತ್ತಾರೆ. ವೈದ್ಯಶಾಸದಲ್ಲಿ ಸಲ್ಮೊನೆಲ್ಲ ಟೈಫ ಎಂದು ಕರೆಯಲ್ಪಡುವ ರೋಗಾಣುವೇ ಇದಕ್ಕೆ ಕಾರಣ. ಆಹಾರ ಅಥವಾ ನೀರಿನ ಮೂಲಕ ಈ ರೋಗಾಣುಗಳು ರಕ್ತದಲ್ಲಿ ಸೇರುತ್ತವೆ. ಜ್ವರ,  ಕೆಮ್ಮು, ತಲೆನೋವು ಮತ್ತು ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು - ಇವು ಈ ರೋಗದ ಲಕ್ಷಣಗಳು. ಹಸಿವು ಕೂಡ ಕಡಿಮೆಯಾಗುತ್ತದೆ. ಜ್ವರ 40 ಡಿಗ್ರಿಯವರೆಗೂ ಏರಬಹುದು. ಸುಮಾರು 30 ದಿನಗಳಲ್ಲಿ ದೇಹದ ಉಷ್ಣಾಂಶ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮಲಿನಗೊಂಡ ನೀರು ಅಥವಾ ಹಾಲಿನಿಂದ ಟೈಫಾಯಿಡ್  ಹರಡುತ್ತದೆ. ಹಸಿ ಆಹಾರವೂ ಟೈಫಾಯಿಡ್  ರೋಗಾಣುಗಳಿಂದ ದೂಷಿತವಾಗಬಹುದು. ನೊಣಗಳೂ ಈ ರೋಗಾಣುಗಳನ್ನು ಒಯ್ಯಬಹುದು. ಹಿಂದಿನ ಕಾಲದಲ್ಲಿ ರೋಗ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 1948ರ ನಂತರ ಈ ರೋಗಕ್ಕಾಗಿ ನಿರ್ದಿಷ್ಟ ಆ್ಯಂಟಿ ಬಯಾಟಿಕ್ ಕಂಡುಹಿಡಿಯಲಾಯಿತು. ಈ ಹಿಂದೆ ಟೈಫಾಯಿಡ್ ನಿಂದ ಪ್ರತಿವರ್ಷ ಸಾವಿರಾರು ಜನ ಸಾಯುತ್ತಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಪ್ರಗತಿಯಿಂದಾಗಿ ಈ ರೋಗವನ್ನು ಬಹುಮಟ್ಟಿಗೆ ನಿಯಂತ್ರಿಸಲಾಗಿದೆ. ಈ ರೋಗ ನಿವಾರಣೆಗೆ ನೈರ್ಮಲ್ಯ ಬಹಳ ಮುಖ್ಯವಾಗಿದೆ.

Read More

ಕೆಲಸ ಬೇಕೇ ಕೆಲಸ?

ಕೆಲಸ ಬೇಕೇ ಕೆಲಸ?
ಕೆಲಸ ಹುಡುಕುತ್ತಿದ್ದೀರಿ. ಆದರೆ ನಿಮ್ಮ ಅರ್ಹತೆಗೆ ತಕ್ಕ ಕೆಲಸ ಸಿಗುತ್ತಿಲ್ಲ. ಸಿಕ್ಕರೂ ಸಂಬಳ ಕಮ್ಮಿ. ಅಥವಾ ಕೆಲಸ, ಸಂಬಳ ಸಿಕ್ಕರೂ ಆ ಕಂಪನಿ ಕಳಿಸುವಷ್ಟು ದೂರ ಹೋಗಲು ನಿಮಗೆ ಇಷ್ಟವಿಲ್ಲ. ನಿಮಗೂ ಇಂಥ ಸಮಸ್ಯೆಗಳು ಕಾಡುತ್ತಿವೆಯೇ? ಹಾಗಿದ್ದರೆ `ಗ್ಲಾಸ್ ಡೋರ್ ಡಾಟ್ ಕಾಂ' ವೆಬ್‍ಸೈಟಿಗೆ ಬನ್ನಿ. ಇಲ್ಲಿ ವೃತ್ತಿ, ಕಂಪನಿಗಳು, ಸಂಬಳ, ಸಂದರ್ಶನ ಎಂಬ ನಾಲ್ಕು ಮುಖ್ಯ ವಿಭಾಗಗಳಿವೆ. ನೀವು ಅರ್ಜಿ ಹಾಕುವ ಕಂಪನಿಯ ಕುರಿತ ಮಾಹಿತಿಗಳು, ಸಂದರ್ಶನದಲ್ಲಿ ಕೇಳಬಹುದಾದ ಪ್ರಶ್ನೆಗಳು, ಸಂಬಳದ ಅಂದಾಜು ಮೊತ್ತ, ಎಲ್ಲಿ ನಿಮಗೆ ಬೇಕಾದ ಕೆಲಸ ಇದೆ - ಹೀಗೆ ಹಲವು ಕುತೂಹಲಕಾರಿ ಮಾಹಿತಿಗಳಿವೆ. ಇಲ್ಲಿಗೆ ಬರಬೇಕೆ? ಲಿಂಕ್ http://www.glassdoor.com/index.htm
Read More

ಫೋನ್ ಬೆಲೆಗೆ ಟ್ಯಾಬ್ಲೆಟ್

ಫೋನ್ ಬೆಲೆಗೆ ಟ್ಯಾಬ್ಲೆಟ್
ಕಳೆದೆರಡು ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್‍ಗಳು ಕಾಲಿಟ್ಟಾಗ ಸಾಮಾನ್ಯನ ಕೈಗೂ ಎಟುಕಬಹುದೆಂಬ ಸುಳಿವಿರಲಿಲ್ಲ. ಆದರೆ ತಂತ್ರe್ಞÁನದ ಸ್ಪರ್ಧೆ ಸಾಮಾನ್ಯ ಮೊಬೈಲ್ ದರಕ್ಕೆ ಟ್ಯಾಬ್ಲೆಟ್‍ಗಳು ಲಭ್ಯವಾಗುವಂತೆ ಮಾಡಿತು. ಕೇಂದ್ರ ಸರ್ಕಾರ ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಖಾಸಗಿ ಕಂಪೆನಿಯೊಂದಿಗೆ  ಒಪ್ಪಂದ ಮಾಡಿಕೊಂಡು ಆಕಾಶ್ ಹೆಸರಿನ ಟ್ಯಾಬ್ಲೆಟ್‍ನ್ನು 1500 ರೂ. ಗೆ ಪರಿಚಯಿಸಿತು. ಇದು ಯಶಸ್ಸು ಕಾಣದಿದ್ದರೂ ಅಗ್ಗದ ಬೆಲೆಯಲ್ಲಿ ಟ್ಯಾಬ್ಲೆಟ್ ಕೊಡಬಹುದಾದ ಸಾಧ್ಯತೆ ಟ್ಯಾಬ್ ಮಾರುಕಟ್ಟೆಗೆ ಹೊಸ ತಿರುವನ್ನೇ ನೀಡಿತು. ಬಿಎಸ್‍ಎನ್‍ಎಲ್ ಮತ್ತು ಪ್ಯಾಂಟಲ್ ಕಂಪೆನಿ ಸೇರಿ 3500 ರೂ.ಗಳಿಂದ 10ಸಾವಿರದ ವರೆಗೆ ವಿವಿಧ ಶ್ರೇಣಿಯ ಟ್ಯಾಬ್ಲೆಟ್ ಗಳನ್ನು ಪರಿಚಯಿಸಿದವು. ಇದರ ಬೆನ್ನಲ್ಲೇ ಮೈಕ್ರೋಮ್ಯಾಕ್ಸ್, ಲಾವಾ, ಕಾರ್ಬನ್ ಕಂಪೆನಿಗಳು 10ಸಾವಿರದೊಳಗೇ ಟ್ಯಾಬ್ಲೆಟ್ ಸಿಗುವಂತೆ ಮಾಡಿದವು.
Read More

ಸ್ಕಾಲರ್‍ಶಿಪ್‍ಗಳ ಮಾಹಿತಿಗೊಂದು ತಾಣ

ಸ್ಕಾಲರ್‍ಶಿಪ್‍ಗಳ ಮಾಹಿತಿಗೊಂದು ತಾಣ
ತುಂಬ ಜನ ಬುದಿಟಛಿವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಎಷ್ಟೋ
ಬಾರಿ ಆರ್ಥಿಕ ಪರಿಸ್ಥಿತಿಯಿಂದಾಗಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದವರಿದ್ದಾರೆ.
ಸಂಶೋಧಕರೂ ಅಷ್ಟೇ. ಎಲ್ಲ ಸಂಶೋಧಕರಿಗೂ ತಮ್ಮ ಸಂಶೋಧನೆಗೆ ಬೇಕಾದಷ್ಟು ಹಣ
ಸಿಗುವುದಿಲ್ಲ. ಆಗ ಸಂಶೋಧನೆಯ ಕನಸೂ ಕಮರುತ್ತದೆ. ಹೀಗಾಗಿ ಅನೇಕ ಜನ ಸ್ಕಾಲರ್
ಶಿಪ್‍ಗಳು, ಫೆಲೋಶಿಪ್‍ಗಳಿಗೆ ಅರ್ಜಿ ಹಾಕುತ್ತಾರೆ. ಅಂಥವರಿಗಾಗಿಯೇ `ಸ್ಕಾಲರ್‍ಶಿಪ್ಸ್
ಇನ್ ಇಂಡಿಯಾ ಡಾಟ್ ಕಾಂ' ಎಂಬ ವೆಬ್‍ಸೈಟ್ ಇದೆ. ಇಲ್ಲಿ ಬೇರೆ ಬೇರೆ ವಿಷಯಗಳಿಗೆ
ಸಂಬಂಧಿಸಿದ ಸ್ಕಾಲರ್‍ಶಿಪ್‍ಗಳು, ಫೆಲೋಶಿಪ್‍ಗಳು, ಸ್ಪರ್ಧೆಗಳು, ಉದ್ಯೋಗಾವಕಾಶ
ಇತ್ಯಾದಿ ವಿವರಗಳಿವೆ. ಆಸಕ್ತರು ಈ ವೆಬ್‍ಸೈಟ್‍ಗೆ ವಿಸಿಟ್ ಕೊಡಬಹುದು. ಲಿಂಕ್: http://www.scholarshipsinindia.com/
Read More

ಮನೆ ಮದ್ದು

ಮನೆ ಮದ್ದು
ಕೊತ್ತಂಬರಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ, ಆ ನೀರನ್ನು ಕುಡಿಯುವುದರಿಂದ ಕಿಡ್ನಿಯಲ್ಲಿ ಕಲ್ಲು ಉಂಟಾಗುವುದನ್ನು ತಡೆಯಬಹುದು.




ಅನೀಮಿಯಾದಿಂದ
ಬಳಲುತ್ತಿರುವವರು
ಪ್ರತಿದಿನ ಬೆಳಗ್ಗೆ
ಒಂದು ಲೋಟ
ಬೀಟ್‍ರೂಟ್ ಜ್ಯೂಸ್
ಸೇವಿಸಬೇಕು.



                                                                       
ಹಲ್ಲುನೋವಿದ್ದರೆ
ಒಂದು ತುಣುಕು
ಹಸಿಶುಂಠಿಯನ್ನು ಜಗಿದು
ಒತ್ತಿ ಹಿಡಿದರೆ ನೋವು
ಕಡಿಮೆಯಾಗುತ್ತದೆ.




ಊಟದಲ್ಲಿ ನಿಯಮಿತವಾಗಿ
ಹಸಿಮೂಲಂಗಿಯನ್ನು ಸೇವಿಸುವುದರಿಂದ
ಕಣ್ಣು, ಮೂಗು, ಕಿವಿ ಮತ್ತು ಗಂಟಲಿನ

ಸಮಸ್ಯೆಗಳು ನಿವಾರಣೆಯಾಗುತ್ತವೆ.


Read More

ನೀವು ಟೆನ್ನಿಸ್ ಪ್ರಿಯರೇ...?

ನೀವು ಟೆನ್ನಿಸ್ ಪ್ರಿಯರೇ...?
ನೀವು ಟೆನ್ನಿಸ್ ಬಗ್ಗೆ ಆಸಕ್ತಿ ಇರುವವರಾದರೆ ಈ ಆಟಗಳನ್ನು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ನೋಡಲಿಕ್ಕೆ ಆಗದಿರಬಹುದು. ಅಂಥ ಹೊತ್ತಲ್ಲಿ ನಿಮಗೆ ಈ ಅಪ್ಲಿಕೇಷನ್ ಹೆಚ್ಚು ಉಪಯೋಗಕ್ಕೆ ಬರುತ್ತದೆ. 15 ದಿನಗಳ ಕಾಲ ನಡೆಯಲಿರುವ ಈ ಪಂದ್ಯಾವಳಿಗಳ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಸಿಗುತ್ತದೆ. ಪ್ರತಿ ಪಂದ್ಯದ ಸ್ಕೋರ್ ವಿವರ ನೇರಪ್ರಸಾರವಾಗುತ್ತದೆ. ಪಂದ್ಯಗಳ ಪಟ್ಟಿ, ಸುದ್ದಿಗಳು ಅಪ್‍ಡೇಟ್ ಆಗುತ್ತವೆ. ಜೊತೆಗೆ ಆಟಗಾರರ ಪರಿಚಯ, ವಿಡಿಯೋಗಳನ್ನು ಈ ಅಪ್ಲಿಕೇಷನ್ ಒದಗಿಸುತ್ತದೆ. ಟೆನ್ನಿಸ್‍ಪ್ರಿಯರಿಗಾಗಿ ಆಲ್ ಇಂಗ್ಲೆಂಡ್ ಲಾನ್ ಟೆನ್ನಿಸ್ ಕ್ಲಬ್ ಸಿದಟಛಿಪಡಿಸಿರುವ ಈ ಅಪ್ಲಿಕೇಷನ್ ಅನ್ನು ಉಚಿತವಾಗಿ ಡೌನ್‍ಲೋಡ್ ಮಾಡಿಕೊಳ್ಳಬಹುದು. http://bit.ly/LPDfXJ
Read More

ಬಿಳಿ ದಾಸವಾಳ ಹೂ ಪ್ರಯೋಜನ

ಬಿಳಿ ದಾಸವಾಳ ಹೂ ಪ್ರಯೋಜನ
ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ
ಶುದಟಛಿ ನೀರಿನಲ್ಲಿ ತೊಳೆದ 4-5 ಬಿಳಿ
ದಾಸವಾಳ ಹೂಗಳನ್ನು ತಿಂದರೆ
ಹೊಟ್ಟೆನೋವು ಬರುವುದಿಲ್ಲ.
Read More

ಥ್ರಿಲ್ಲಿಂಗ್ ಆಟ ಮಿಸ್ ಮಾಡಿಕೊಳ್ಳಬೇಡಿ!

ಥ್ರಿಲ್ಲಿಂಗ್ ಆಟ ಮಿಸ್ ಮಾಡಿಕೊಳ್ಳಬೇಡಿ!
ಆಂಡ್ರೆ ಎಂಬ ಹೆಂಗಸು ಕಳೆದು ಹೋದ ತನ್ನ ಗಂಡನನ್ನು ಹುಡುಕುವುದೇ ಈ ಗೇಮ್. ಹೆಸರು,
`ಲೆಟರ್ಸ್ ಫ್ರಮ್ ನೋವೇರ್'. ಸತ್ತು ಬಿದ್ದ ಪೋಸ್ಟ್ ಮ್ಯಾನ್ ಬಳಿ ಇದ್ದ ಲೆಟರ್‍ಗಳನ್ನು ಸಂಗ್ರಹಿಸಿ
ಅದರ ಮೂಲಕ ಗಂಡನ ಪತ್ತೆಗೆ ಹೊರಡುತ್ತಾಳೆ ಅಂಡ್ರೆ. ಹುಡುಕಾಟದ ವೇಳೆ ಎದುರಾಗುವ
ಸವಾಲುಗಳನ್ನು ಪರಿಹರಿಸುತ್ತಾ ಮುಂದೆ ಸಾಗುತ್ತಾ ಹೋಗುತ್ತಾಳೆ. ಭಯ ಹುಟ್ಟಿಸುವ,
ರೋಮಾಂಚಕಾರಿಯಾದ, ನಿಗೂಢವಾದ ಅನುಭವ ನೀಡುವ ಈ ಗೇಮ್ ಇದು. 11 ವಿಶಿಷ್ಟವಾದ
ಸಾಹಸ ಪ್ರಧಾನವಾದ ಸೆಟ್ಟಿಂಗ್‍ಗಳು, 50 ಆಕರ್ಷಕ ಸೆಟ್ಟಿಂಗ್‍ಗಳು ಗೇಮ್‍ನ ಉದ್ದಕ್ಕೂ ಇವೆ.
ಈ ಗೇಮ್‍ನಲ್ಲಿ 11 ಮಿನಿ ಗೇಮ್‍ಗಳೂ ಇವೆ. ಒಂದೊಂದು ಪತ್ರವೂ ಒಂದೊಂದು ಸುಳಿವು
ನೀಡುತ್ತಾ ಆಂಡ್ರೆಯನ್ನು ಗಂಡನ ಹತ್ತಿರ ಕರೆದೊಯ್ಯುತ್ತವೆ. ಆದರೆ ಆ ಸುಳಿವನ್ನು ಬಿಡಿಸಿ ದಾರಿ
ಕಂಡುಕೊಳ್ಳುವುದೇ ಗೇಮ್‍ನಲ್ಲಿರುವ ಮಜ. ಗೇಮ್ ಬಗ್ಗೆ ಕುತೂಹಲವಿದೆಯಾ? ಇಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಿ. http://bit.ly/NbKgaj


Read More

ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರ

ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರ

ಇಂದಿನ ದಿನದಲ್ಲಿ ಹೊಟ್ಟೆ ಉಬ್ಬರದ ಸಮಸ್ಯೆ ಸಾಮಾನ್ಯ. ಇಂತಹ ಸಮಸ್ಯೆಯಿಂದ ಬಳಲುವವರು ಪ್ರತಿದಿನ ಅಲ್ಪ ಪ್ರಮಾಣದಲ್ಲಿ ನೆಲ್ಲಿಕಾಯಿ ಸೇವಿಸುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ನಿವಾರಣೆಯಾಗುತ್ತದೆ.
Read More

ಮೃಗಾಲಯದ ಚಿರತೆ ಸೆರೆ

ಮೃಗಾಲಯದ ಚಿರತೆ ಸೆರೆ
ಚಿತ್ರದುರ್ಗ: ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಬೋನು ಸ್ವಚ್ಛಗೊಳಿಸುವಾಗ ತಪ್ಪಿಸಿಕೊಂಡಿದ್ದ ಚಿರತೆಯನ್ನು 3 ತಾಸುಗಳ ಕಾರ್ಯಾಚರಣೆ ನಡೆಸಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಯಿಡಿದಿದ್ದಾರೆ.
ಬೋನು ಸ್ವಚ್ಛಗೊಳಿಸಲು ಮೃಗಾಲಯದ ಸಿಬ್ಬಂದಿ ರಾಮಾಂಜನೇಯ ಭಾನುವಾರ ಬೆಳಗ್ಗೆ 7.30ರಲ್ಲಿ 4 ವರ್ಷದ ಚಿರತೆ ‘ಭೀಮ’ನನ್ನು ಬೇರೊಂದು ಬೋನಿಗೆ ಸ್ಥಳಾಂತರಿಸಲಾಗಿತ್ತು. ಆದರೆ, ಆ ಬೋನಿನ ಬಾಗಿಲನ್ನು ಸರಿಯಾಗಿ ಹಾಕಿರಲಿಲ್ಲ.
ಬೆಳಗ್ಗೆ ಮೃಗಾಲಯಕ್ಕೆ ಬಂದಿದ್ದ ಪ್ರವಾಸಿಗಳು, ಚಿರತೆ ಕಂಡು ದಿಕ್ಕಾಪಾಲಾಗಿ ಓಡಿದರು. ಚಿರತೆಯೂ ಕಂಗಾಲಾಗಿ ಮೃಗಾಲಯದ ಬಳಿಯೇ ಇದ್ದ ಚರಂಡಿಯಲ್ಲಿ ಬಿದ್ದು ಬಳಿಕ ಪೊದೆಗೆ ನುಗ್ಗಿ ಅವಿತು ಕುಳಿತಿತ್ತು.
ತಕ್ಷಣವೇ ಮೃಗಾಲಯದ ಸಿಬ್ಬಂದಿ ನಗರಕ್ಕೆ ಧಾವಿಸಿ ಹಂದಿ ಹಿಡಿಯುವವರನ್ನು ಕರೆದೊಯ್ದು ಚಿರತೆ ಸೆರೆಗೆ ಬಲೆ ಬೀಸಿದ್ದಾರೆ. 3 ತಾಸಿನ ಬಳಿಕ ಪೊದೆಯಿಂದ ಹೊರಬಂದಾಗ ಅದನ್ನು ಸೆರೆಹಿಡಿದಿದ್ದಾರೆ.
ಇದರಿಂದ ಪ್ರವಾಸಿಗರು ನಿಟ್ಟುಸಿರು ಬಿಟ್ಟಿದ್ದಾರೆ.
Read More

ಹಣ್ಣುಗಳ ಸೇವನೆಯಿಂದ....

ಹಣ್ಣುಗಳ ಸೇವನೆಯಿಂದ....
ದಾಳಿಂಬೆ ಜ್ಯೂಸ್ ನ ನಿಯಮಿತ ಸೇವನೆಯಿಂದ ಶರೀರದ ಉಷ್ಣತೆಯನ್ನು ಕಡಿಮೆಗೊಳಿಸಿ ದೇಹವನ್ನು ತಂಪಾಗಿಸಿಕೊಳ್ಳಬಹುದು.

ಆಹಾರದಲ್ಲಿ ನಿಯಮಿತ ಟ್ಯೊಮ್ಯಾಟೋ ಬಳಕೆಯಿಂದ ಅಜೀರ್ಣದ ತೊಂದರೆಯನ್ನು ಹತೋಟಿಗೆ ತರಬಹುದು.

ಪ್ರತಿದಿನ ಊಟದ ನಂತರ ಹಾಗೂ ಮೊದಲು ನೀರಿನಲ್ಲಿ ನಿಂಬೆರಸ ಬೆರೆಸಿ ಕುಡಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
Read More