ಆಹಾರ ವಿಚಾರ

ಆಹಾರ ವಿಚಾರ
ನಾವು ಸೇವಿಸುವ ಆಹಾರ ಕೆಲವೊಮ್ಮೆ ವಿಷವಾಗಿ ಮಾರ್ಪಡುವುದರಿಂದ ಆರೋಗ್ಯಕ್ಕೆ ಹಾನಿಕರವಾಗುತ್ತದೆ. ಆಹಾರವನ್ನು ಸರಿಯಾಗಿ ತಯಾರಿಸದೆ ಅಥವಾ ಅದನ್ನು ಶುದ್ಧವಾಗಿ ಶೇಖರಿಸದೆ ಹೋದರೆ ಅದು ವಿಷವಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಜನರು ಅಸ್ವಸ್ಥರಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. ಹೆಚ್ಚಿನವರು ಈ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈ ಅಪಾಯದಿಂದ ನೀವು ದೂರವಿರಲು ಏನು ಮಾಡಬಹುದು?


  • ತರಕಾರಿಗಳನ್ನು ಔಷಧಿ, ಗೊಬ್ಬರ ಉಪಯೋಗಿಸಿ ಬೆಳೆಸುತ್ತಾರೆ. ಆದ್ದರಿಂದ ನೀವು ತರಕಾರಿಗಳನ್ನು ಉಪಯೋಗಿಸುವಾಗ ಅವುಗಳನ್ನು ಚೆನ್ನಾಗಿ ತೊಳೆಯಿರಿ.
  • ಆಹಾರ ತಯಾರಿಸುವ ಮುಂಚೆ ತರಕಾರಿ ಹೆಚ್ಚುವ ಮಣೆ, ಪಾತ್ರೆ, ತಟ್ಟೆ ಮತ್ತು ನಿಮ್ಮ ಕೈಗಳಿಗೆ ಸೋಪು ಹಚ್ಚಿ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
  • ಮೊಟ್ಟೆ, ಮಾಂಸ, ಮೀನನ್ನು ಇಟ್ಟ ಪಾತ್ರೆ ಅಥವಾ ಸ್ಥಳವನ್ನು ತೊಳೆದು ಶುದ್ಧ ಮಾಡಿದ ನಂತರವೇ ಆಹಾರ ಪದಾರ್ಥಗಳನ್ನು ಇಡಿ.
  • ಆಹಾರವನ್ನು ಚೆನ್ನಾಗಿ ಬೇಯಿಸಿ, ಬೇಗನೇ ಕೆಡುವಂಥ ಆಹಾರವನ್ನು ತಕ್ಷಣ ಬಳಸದೇ ಇದ್ದಲ್ಲಿ ಅದನ್ನು ಫ್ರಿಜ್ನಲ್ಲಿ ಇಡಿ. 
Read More

ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಹೆಜ್ಜೆಗಳು

ಆರೋಗ್ಯ ಕಾಪಾಡಿಕೊಳ್ಳಲು ಸುಲಭ ಹೆಜ್ಜೆಗಳು
ಕಾಯಿಲೆಗೆ ಒಳಗಾಗುವುದು ಯಾರಿಗೆ ಇಷ್ಟ ಹೇಳಿ. ಕಾಯಿಲೆ ಬಂದಾಗ ಯಾವ ಕೆಲಸವನ್ನೂ ಮಾಡಲು ದೇಹ ಸ್ಪೂರ್ತಿ ನೀಡುವುದಿಲ್ಲ. ನಾವು ಎಷ್ಟೇ ಮುಂಜಾಗ್ರತೆ ವಹಿಸಿದರೂ ಕಾಯಿಲೆಗಳನ್ನು ತಡೆಗಟ್ಟಲು ಆಗುವುದಿಲ್ಲ. ಆದರೆ ನಮ್ಮ ಮುಂಜಾಗ್ರತೆಯಿಂದ ಅನೇಕ ಕಾಯಿಲೆಗಳಿಂದ ನಮ್ಮನ್ನು ಕಾಪಾಡಿಕೊಳ್ಳಬಹುದು.

ಶುದ್ಧತೆ ಕಾಪಾಡಿಕೊಳ್ಳಿ
ದೇಹಕ್ಕೆ ಕಾಯಿಲೆ ಬರಬಾರದು ಎಂದರೆ ಮುಖ್ಯವಾಗಿ ನಿಗಾವಹಿಸಬೇಕಾದ ಮೊದಲ ಸಂಗತಿ ಶುದ್ಧತೆ. ನಮ್ಮ ಕೈಗಳು ಅಶುದ್ಧವಾಗಿದ್ದರೆ ರೋಗವನ್ನುಂಟು ಮಾಡುವ ಸೂಕ್ಷ್ಮಾಣು ಜೀವಿಗಳು ಜೀವಿಸಿರುತ್ತವೆ. ಕೈ ತೊಳೆಯದೆ ಮೂಗು ಅಥವಾ ಕಣ್ಣುಗಳನ್ನು ಮುಟ್ಟುವುದಾದರೆ ಸುಲಭವಾಗಿ ಶೀತ, ನೆಗಡಿ, ಜ್ವರ ಬರುತ್ತದೆ. ಈ ಅಪಾಯದಿಂದ ದೂರವಿರಬೇಕಾದರೆ ನಾವು ಆಗಿಂದಾಗ್ಗೆ ನಮ್ಮ ಕೈ ತೊಳೆದುಕೊಳ್ಳುತ್ತಾ ಇರಬೇಕು. ಈ ರೀತಿ ಶುದ್ಧತೆ ಕಾಪಾಡಿಕೊಳ್ಳುವುದರಿಂದ ನ್ಯುಮೋನಿಯ ಮತ್ತು ಭೇದಿಯಂತಹ ಕಾಯಿಲೆಗಳು ಹರಡದಂತೆ ತಡೆಗಟ್ಟಬಹುದು. ಈ ಕಾಯಿಲೆಗಳಿಂದಾಗಿ ಪ್ರತಿ ವರ್ಷ 5 ವರ್ಷದೊಳಗಿನ ಸುಮಾರು 20 ಲಕ್ಷ ಮಕ್ಕಳು ಸಾಯುತ್ತಿz್ದÁರೆ  ಎಂದು ಸಂಶೋಧನೆ ಹೇಳಿದೆ. ಕೈ ತೊಳೆಯುವುದು ಚಿಕ್ಕ ವಿಷಯ ಅಂತ ಅನ್ನಿಸಬಹುದು, ಆದರೆ ಅದನ್ನು ಪಾಲಿಸಿದರೆ ಎಬೋಲದಂತಹ ರೋಗಗಳನ್ನೂ ಹರಡದಂತೆ ತಡೆಯಬಹುದು.

ಶುದ್ಧ ನೀರನ್ನು ಬಳಸಿ
ಎಷ್ಟೋ ದೇಶಗಳಲ್ಲಿ ಇಂದಿಗೂ ಶುದ್ಧ ನೀರಿಗೆ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಪ್ರವಾಹ, ಬಿರುಗಾಳಿ ಸಂಭವಿಸಿದರೆ, ನೀರಿನ ಕೊಳವೆಗಳು ಒಡೆದು ಹೋದರೆ ಶುದ್ಧ ನೀರು ಕಲುಷಿತವಾಗುವ ಸಾಧ್ಯತೆಗಳಿವೆ. ನೀರನ್ನು ಶುದ್ಧ ಮೂಲದಿಂದ ಪಡೆಯದಿದ್ದರೆ ಅಥವಾ ನೀರನ್ನು ಸರಿಯಾಗಿ ಸಂಗ್ರಹಿಸಿ ಇಡದಿದ್ದರೆ ಕೀಟಾಣುಗಳು ಹುಟ್ಟಿ ರೋಗಗಳು ಕಾಲರ, ಭೇದಿ, ಟೈಫಾಯಿಡ್, ಹೆಪಟೈಟಿಸ್ ಮತ್ತು ಇತರ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇದೆ.
ನೀವು ಉಪಯೋಗಿಸುವ ನೀರು ಸುರಕ್ಷಿತ ಮೂಲದಿಂದ ಬರುತ್ತಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಕೇವಲ ಕುಡಿಯುವ ನೀರು ಮಾತ್ರವಲ್ಲ ಅಡುಗೆ ಮಾಡಲು, ಹಲ್ಲು ಉಜ್ಜಲು, ತರಕಾರಿ ಮತ್ತು ಪಾತ್ರೆ ತೊಳೆಯಲು ಉಪಯೋಗಿಸುವ ನೀರು ಶುದ್ಧವಾಗಿದೆಯಾ ಎಂದೂ ಪರೀಕ್ಷಿಸಿ. ಶುದ್ಧ ಎಂದು ಮನವರಿಕೆಯಾದ ನೀರನ್ನು ಉಪಯೋಗಿಸಿ.
ಕೊಳವೆ ನೀರು ಶುದ್ಧವಾಗಿಲ್ಲ ಎಂದು ನಿಮಗೆ ತಿಳಿದರೆ, ಆ ನೀರನ್ನು ಉಪಯೋಗಿಸುವ ಮುಂಚೆ ಚೆನ್ನಾಗಿ ಕುದಿಸಿ ಅಥವಾ ನೀರನ್ನು ರಾಸಾಯನಿಕದಿಂದ ಶುದ್ಧೀಕರಿಸಿ., ಕ್ಲೋರಿನ್ ಅಥವಾ ನೀರನ್ನು ಶುದ್ಧೀಕರಿಸುವ ಇತರ ಕೆಮಿಕಲ್‍ಗಳನ್ನು ಉಪಯೋಗಿಸುವಾಗ ಅದರ ತಯಾರಕರ ನಿರ್ದೆಶನವನ್ನು ತಪ್ಪದೇ ಪಾಲಿಸಿ.
ನಾವು ವಿನಾಕಾರಣ ಅನಗತ್ಯ ಕಾರಣಗಳಿಗಾಗಿ ಹಣ ವ್ಯಯಮಾಡುತ್ತೇವೆ. ಆದರೆ, ಆರೋಗ್ಯ ರಕ್ಷಣೆಗೆ ಉತ್ತಮ ಗುಣಮಟ್ಟದ ವಾಟರ್ ಫಿಲ್ಟರ್‍ಗಳನ್ನು ಮನೆಯಲ್ಲಿ ತಂದು ಉಪಯೋಗಿಸಿದರೆ ನಮ್ಮ ಹಾಗೂ ಕುಟುಂಬದ ಆರೋಗ್ಯವನ್ನು ರಕ್ಷಣೆ ಮಾಡಬಹುದು.

ಪೌಷ್ಟಿಕ ಆಹಾರ ಸೇವಿಸಿ
ಒಳ್ಳೆಯ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ಸೇವಿಸುವುದು ಅಗತ್ಯ. ಹಣ್ಣು, ತರಕಾರಿ ಹೆಚ್ಚು ತಿನ್ನಿ. ಆದರೆ ನೀವು ತಿನ್ನುವ ಆಹಾರದಲ್ಲಿ ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಅಂಶ ಎಷ್ಟಿದೆ ಎಂದು ತಿಳಿದುಕೊಳ್ಳಿ. ನೀವು ಸೇವಿಸುವ ಆಹಾರ ಮಿತವಾಗಿರಲಿ. ಅಕ್ಕಿ, ಬೇಳೆಯಂತಹ ದವಸಧಾನ್ಯಗಳನ್ನು ಹೆಚ್ಚಾಗಿ ಸೇವಿಸಿ.
ಮೊಟ್ಟೆ, ಮಾಂಸ ಮತ್ತು ಮೀನಿನಲ್ಲಿ ಪ್ರೋಟಿನ್ ಅಂಶ ಹೆಚ್ಚಿರುತ್ತದೆ. ಆದರೆ ಕೊಬ್ಬು ಕಡಿಮೆಯಿರುವ ಮಾಂಸವನ್ನೇ ಆಯ್ದುಕೊಳ್ಳೀ. ಅದನ್ನೂ ಹೆಚ್ಚು ತಿನ್ನಬೇಡಿ. ವಾರಕ್ಕೆ ಎರಡು-ಮೂರು ಸಾರಿ ಮೀನು ತಿಂದರೆ ಒಳ್ಳೆಯದು. ಸೊಪ್ಪು, ತರಕಾರಿಗಳಲ್ಲೂ ಹೆಚ್ಚು ಪ್ರೋಟಿನ್ಗಳು ನಮ್ಮ ದೇಹಕ್ಕೆ ಸಿಗುತ್ತವೆ..
ಸಕ್ಕರೆ, ಮೈದಾ ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಆಹಾರವನ್ನು ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗುವ ಅಪಾಯವಿದೆ. ಈ ಅಪಾಯವನ್ನು ತಪ್ಪಿಸಲು ಸಿಹಿ ಪಾನೀಯಗಳ ಬದಲು ಹೆಚ್ಚು ಶುದ್ಧ ನೀರು ಕುಡಿಯುವುದು ಉತ್ತಮ. ಸಿಹಿ ತಿಂಡಿ ತಿನಿಸುಗಳನ್ನು ತಿನ್ನುವುದಕ್ಕಿಂತ ಹಣ್ಣುಗಳನ್ನು ತಿನ್ನಿ. ಅಡುಗೆಯಲ್ಲಿ ಡಾಲ್ಡಾ, ತುಪ್ಪ ಮುಂತಾದ ಘನರೂಪದ ಕೊಬ್ಬನ್ನು ಉಪಯೋಗಿಸುವ ಬದಲು ಕೊಬ್ಬಿನಾಂಶ ಕಡಿಮೆಯಿರುವ ಎಣ್ಣೆಯನ್ನೇ ಉಪಯೋಗಿಸಿದರೆ ಉತ್ತಮ.

ವ್ಯಾಯಾಮ ಮಾಡಿ
ಪ್ರತಿಯೊಬ್ಬರಿಗೂ ವ್ಯಾಯಾಮ ಅತ್ಯಗತ್ಯ. ಆದರೆ ಇಂದು ಅನೇಕ ಜನ ವ್ಯಾಯಾಮ ಮಾಡುವುದೇ ಇಲ್ಲ. ಇಷ್ಟಕ್ಕೂ ವ್ಯಾಯಾಮ ಮಾಡುವುದರಿಂದ ಏನು ಪ್ರಯೋಜನ? ಎಂದು ನಿಮಗೆ ಅನ್ನಿಸಿದರೆ,

  • ವ್ಯಾಯಾಮದಿಂದ ದೇಹ ದಣಿವಾದರೆ ಚೆನ್ನಾಗಿ ನಿದ್ದೆ ಬರುತ್ತದೆ.
  • ಹೆಚ್ಚು ಚುರುಕಾಗಿರಬಹುದು.
  • ಮೂಳೆ ಮತ್ತು ಮಾಂಸ ಖಂಡಗಳು ಗಟ್ಟಿಮುಟ್ಟಾಗುತ್ತವೆ.
  • ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದು.
  • ಮಾನಸಿಕವಾಗಿ ಕುಗ್ಗಿಹೋಗುವ ಸಾಧ್ಯತೆ ಕಡಿಮೆಯಿರುತ್ತದೆ.
  • ಆಯಸ್ಸು ಹೆಚ್ಚುತ್ತದೆ.


ಸಾಕಷ್ಟು ನಿದ್ದೆ ಮಾಡಿ
ಎಷ್ಟು ಹೊತ್ತು ನಿದ್ದೆ ಮಾಡಬೇಕು ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಎಳೇ ಮಗು ದಿನಕ್ಕೆ 16ರಿಂದ 18 ಗಂಟೆ ನಿದ್ದೆ ಮಾಡಿದರೆ, 1ರಿಂದ 3 ವರ್ಷದ ಮಗು 14 ಗಂಟೆ ನಿದ್ದೆ ಮಾಡುತ್ತದೆ. 3ರಿಂದ 5 ವರ್ಷದ ಮಗು 11 ಅಥವಾ 12 ಗಂಟೆ ನಿದ್ದೆ ಮಾಡಬೇಕು. 6ರಿಂದ 12 ವರ್ಷದ ಮಕ್ಕಳು 10 ಗಂಟೆ, ಹದಿವಯಸ್ಕರು 9 ರಿಂದ 10 ಗಂಟೆ ಹಾಗೂ ವಯಸ್ಕರು 7 ರಿಂದ 8 ಗಂಟೆ ನಿದ್ದೆ ಮಾಡಬೇಕು.
ನಿದ್ರೆಯ ಪ್ರಯೋಜನ

  • ಬೆಳವಣಿಗೆಗೆ ಸಹಕಾರಿ
  • ಹೊಸ ವಿಷಯಗಳನ್ನು ಕಲಿಯಲು ಮತ್ತು ಅವನ್ನು ಮನಸ್ಸಿನಲ್ಲಿಟ್ಟುಕೊಳ್ಳಲು ಸಹಾಯವಾಗುತ್ತದೆ.
  • ದೇಹದ ಬೆಳವಣಿಗೆ ಮತ್ತು ತೂಕವನ್ನು ಸಮತೋಲನದಲ್ಲಿಡುವ ಹಾರ್ಮೊನುಗಳ ಪ್ರಮಾಣ ನಿಯಂತ್ರಣದಲ್ಲಿರುತ್ತದೆ.
  • ಹೃದಯ ಮತ್ತು ರಕ್ತ ನಾಳಗಳು ಸರಿಯಾಗಿ ಕೆಲಸ ಮಾಡುತ್ತವೆ.
  • ಕಾಯಿಲೆಗಳು ಬರುವ ಸಾಧ್ಯತೆ ಕಡಿಮೆ.
  • ಸಾಕಷ್ಟು ನಿದ್ದೆ ಮಾಡದಿದ್ದರೆ ದೇಹದ ತೂಕ ಹೆಚ್ಚಾಗುತ್ತದೆ, ಖಿನ್ನತೆ, ಹೃದ್ರೋಗ, ಸಕ್ಕರೆ ಕಾಯಿಲೆ, ಮತ್ತು ಭೀಕರ ಅಪಘಾತ ನಡೆಯುವ ಸಾಧ್ಯತೆಯಿದೆ. 

ಈ ಎಲ್ಲಾ ಕಾರಣಗಳಿಂದಾಗಿ ಪ್ರತಿಯೊಬ್ಬರು ತಮಗೆ ಬೇಕಷ್ಟು ನಿದ್ದೆ ಮಾಡಿದರೆ ಅನುಕೂಲ.

Read More

ಮೂಲವ್ಯಾಧಿಗೆ ಮನೆಮದ್ದು

ಮೂಲವ್ಯಾಧಿಗೆ ಮನೆಮದ್ದು

  • ಅಂಜೂರ ಹಾಗೂ ಒಣ ದ್ರಾಕ್ಷಿಗಳನ್ನು ಚೆನ್ನಾಗಿ ತೊಳೆದು, ರಾತ್ರಿ ಒಂದು ಲೋಟ ಶುದ್ದ ಕುಡಿಯುವ ನೀರಿನಲ್ಲಿ ನೆನೆಯಿಟ್ಟು, ಬೆಳಗಿನ ಜಾವ, ಉಬ್ಬಿರುವ ಹಣ್ಣುಗಳನ್ನು ಅದೇ ನೀರಲ್ಲಿ ಕಿವುಚಿ ಸೇವಿಸಬೇಕು. ನೆನಪಿಡಿ ಇದು ಮಧುಮೇಹಿಗಳಿಗೆ ನಿಷೇಧ
  • ಮೂಲಂಗಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆಯ ತೆಳುಪದರವನ್ನು ತೆಗೆದು, ಚಿಕ್ಕದಾಗಿ ಹೆಚ್ಚಿಕೊಂಡು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿರಿ. ಅರ್ಧ ಬಟ್ಟಲಷ್ಟು ಈ ಮೂಲಂಗಿ ತಿರುಳು ರಸವನ್ನು ತೆಗೆದುಕೊಳ್ಳಿ. ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ, ಅರ್ಧ ಹೋಳು ನಿಂಬೆರಸವನ್ನು ಹಿಂಡಿರಿ. ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿ ಜಜ್ಜಿಕೊಂಡ ಹಸಿಶುಂಠಿಯನ್ನು ಒಂದು ತೆಳು ಶುಭ್ರಬಟ್ಟೆಯಲ್ಲಿಟ್ಟು ಹಿಂಡಿ, ರಸವನ್ನು ಮೇಲಿನ ಮಿಶ್ರಣಕ್ಕೆ ಸೇರಿಸಿ. ಚೆನ್ನಾಗಿ ಕಲಸಿ, ತಾಜಾ ಇರುವಾಗಲೇ ಸೇವಿಸಿರಿ.
  • ಬೀಟ್ರೂಟ್, ಗಜ್ಜರಿ, ಒಂದಂಗುಲ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಕತ್ತರಿಸಿ ನಂತರ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಂಡು ಆ ರಸ ತಾಜಾ ಇರುವಾಗಲೇ ಸೇವಿಸಿ. ಇದು ಮೂಲವ್ಯಾಧಿಯನ್ನು ಕಡಿಮೆ ಮಾಡುತ್ತದೆ, ದೇಹಕ್ಕೆ ಉತ್ತಮ ಪೋಷಕಾಂಶಗಳನ್ನೂ ನೀಡುತ್ತದೆ. 
  • ಒಂದು ಬಟ್ಟಲಲ್ಲಿ 1 ಚಿಟಿಕೆ ಸೈಂಧವ ಲವಣ ತೆಗೆದುಕೊಂಡು ಅದಕ್ಕೆ ಕಾಲು ಚಮಚ ಅಮೃತಬಳ್ಳಿಯ ಮೃದು ಚೂರ್ಣ ಹಾಕಿ, ಕಾಲು ಚಮಚ ಅಳಲೆಕಾಯಿ ಚೂರ್ಣ ಹಾಕಿ, ಇದಕ್ಕೆ ಸಿಹಿಮಜ್ಜಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ತಾಜಾ ಇರುವಾಗಲೇ ಸೇವಿಸಿ. ಬೊಜ್ಜು, ಮೂಲವ್ಯಾಧಿ ಹಾಗೂ ಅತಿಸಾರದ ನಿವಾರಣೆಗೆ ಸಹಾಯಕಾರಿ.
  • ಲೋಳೆಸರದ ತಿರುಳಿನ ರಸವನ್ನು ಮೂಲವ್ಯಾಧಿಯ
  • ಮೊಳಕೆಗೆ ಅಥವಾ ಗಾಯಕ್ಕೆ ನೇರವಾಗಿ ಹಚ್ಚಬೇಕು.
  • ಆಗ ತುರಿಕೆ, ನೋವು, ಉರಿ ಕಡಿಮೆಯಾಗಿ, ಮೂಲವ್ಯಾಧಿ ಹತೋಟಿಗೆ ಬರುತ್ತದೆ.
  • ಇಂದಿನ ಆಧುನಿಕ ಯುಗದಲ್ಲಿ ಕೆಲಸದ ಒತ್ತಡಕ್ಕೆ ಮಣಿದು ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯುವುದನ್ನೇ ಕಡಿಮೆ ಮಾಡಿದ್ದೇವೆ ಇದರಿಂದ ಅನೇಕ ಭಾದೆಗಳು ಕಾಡಲು ಆರಂಭಿಸಿವೆ. ಅದರಲ್ಲಿ ಮೂಲವ್ಯಾಧಿಯೂ ಒಂದು ಇದರಿಂದ ನಿವಾರಣೆ ಕಾಣಬೇಕಾದರೆ,  ಬೆಳಗ್ಗೆ ಎದ್ದ ಕೂಡಲೇ ಒಂದು ಲೀಟರ್‍ನಷ್ಟು ನೀರನ್ನು ಗಟಗಟನೆ ಕುಡಿಯಬೇಕು. ಹಲ್ಲುಜ್ಜುವ ಮೊದಲೇ  ಮಾಡಿದರೂ ಒಳ್ಳೆಯದು. ಇದರಿಂದ ಮೂಲವ್ಯಾಧಿ ಶಮನವಾಗುತ್ತದೆ.
  • ಬೀಟ್ರೂಟ್ ಹಾಗೂ ಪುದಿನವನ್ನು ತೆಗೆದುಕೊಳ್ಳಿ, ಬೀಟ್ರೂಟ್ ಸಿಪ್ಪೆ ತೆಗೆದು, ಚಿಕ್ಕದಾಗಿ ಕತ್ತರಿಸಿಕೊಂಡು ರುಬ್ಬಿಕೊಳ್ಳಿ. ಒಂದು ಬಟ್ಟಲಿಗೆ ಚಿಟಿಕೆ ಸೈಂಧವ ಲವಣ ಹಾಕಿಕೊಳ್ಳಿ.  1 ಚಮಚ ರುಬ್ಬಿಕೊಂಡ ಪುದಿನ ಹಾಕಿರಿ. ಸ್ವಲ್ಪ  ನೀರನ್ನು ಸೇರಿಸಿ. ಈಗ ರುಬ್ಬಿದ ಬೀಟ್ರೂಟನ್ನು 1  ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿರಿ. ನಂತರ 1  ಚಮಚ ಜೇನುತುಪ್ಪ ಸೇರಿಸಿ, ತಾಜಾ ಇರುವಾಗಲೇ ಸೇವಿಸಿ. ಇದು ದೇಹಕ್ಕೆ ನಾರಿನಂಶ,  ಕಬ್ಬಿಣಾಂಶ ನೀಡಿ ರಕ್ತಹೀನತೆಯನ್ನು  ಕಡಿಮೆ ಮಾಡುತ್ತದೆ ಹಾಗೂ ಮಲಬದ್ಧತೆ, ಮೂಲವ್ಯಾಧಿಯನ್ನು ಕಡಿಮೆ ಮಾಡುತ್ತದೆ.


Read More

ನಿದ್ರೆ ಬರುತ್ತಿಲ್ಲವೇ ? ಇಲ್ಲಿದೆ ಪರಿಹಾರ

ನಿದ್ರೆ ಬರುತ್ತಿಲ್ಲವೇ ? ಇಲ್ಲಿದೆ ಪರಿಹಾರ

  • ಒಂದೊಂದು ದಿನ ಒಂದೊಂದು ಸಮಯಕ್ಕೆ ಮಲಗುವುದು, ಏಳುವುದು ಮಾಡಬಾರದು.
  • ನಿಮ್ಮ ಮಲಗುವ ಕೋಣೆಯಲ್ಲಿ ಕತ್ತಲಿರುವಂತೆ, ಶಬ್ದವಿಲ್ಲದೆ ಶಾಂತಿಯಿರುವಂತೆ ಮತ್ತು ತೀರಾ ಸೆಕೆಯೂ ತೀರಾ ಚಳಿಯೂ ಇಲ್ಲದಂತೆ ನೋಡಿಕೊಳ್ಳಿ.
  • ಮಲಗಿರುವಾಗ ಮೊಬೈಲ್, ಟ್ಯಾಬ್ಲೆಟ್ ನ ಉಪಯೋಗಿಸಬೇಡಿ ಅಥವಾ ಟಿ.ವಿ. ನೋಡಬೇಡಿ.
  • ನಿಮ್ಮ ಹಾಸಿಗೆಯನ್ನು ನಿಮಗೆ ಹೇಗೆ ಬೇಕೋ ಹಾಗೆ ನೀವೇ ಸಿದ್ಧಪಡಿಸಿಕೊಳ್ಳಿ.
  • ಮಲಗುವ ಸಮಯದಲ್ಲಿ ಕಾಫಿ, ಟೀ, ಮದ್ಯ ಸೇವನೆ ಅಥವಾ ಅತಿಯಾದ ಆಹಾರ ಸೇವನೆ ಬೇಡ.

ಈ ಸಲಹೆಗಳನ್ನು ಅನ್ವಯಿಸಿದ ಮೇಲೂ ನಿಮಗೆ ಇನ್ನೂ ನಿದ್ರೆ  ಸಂಬಂಧಿಸಿದ ಸಮಸ್ಯೆ ಇದ್ದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.
Read More

ನಾವು ಈ ಸಂದರ್ಭಗಳಲ್ಲಿ ಕೈಗಳನ್ನು ತೊಳೆಯಲೇಬೇಕು

ನಾವು ಈ ಸಂದರ್ಭಗಳಲ್ಲಿ ಕೈಗಳನ್ನು ತೊಳೆಯಲೇಬೇಕು

  • ಶೌಚಾಲಯಕ್ಕೆ ಹೋಗಿ ಬಂದ ನಂತರ
  • ಮಗುವಿನ ಡೈಪರ್ ಬದಲಾಯಿಸಿದ ನಂತರ ಮತ್ತು ಶೌಚಾಲಯಕ್ಕೆ ಹೋಗಲು ಮಗುವಿಗೆ ಸಹಾಯಮಾಡಿದ ನಂತರ
  • ಗಾಯಕ್ಕೆ ಔಷಧಿ ಹಚ್ಚುವ ಮುಂಚೆ ಮತ್ತು ನಂತರ
  • ಕಾಯಿಲೆ ಬಿದ್ದವರನ್ನು ಭೇಟಿಯಾಗುವ ಮುಂಚೆ ಮತ್ತು ನಂತರ
  • ಆಹಾರವನ್ನು ತಯಾರಿಸುವ, ಬಡಿಸುವ ಮತ್ತು ತಿನ್ನುವ ಮುಂಚೆ
  • ಕೆಮ್ಮಿದ, ಸೀನಿದ ಮತ್ತು ಮೂಗನ್ನು ಒರೆಸಿಕೊಂಡ ನಂತರ
  • ಪ್ರಾಣಿಯನ್ನು ಅಥವಾ ಪ್ರಾಣಿಯ ತ್ಯಾಜ್ಯವನ್ನು ಮುಟ್ಟಿದ ನಂತರ
  • ಕಸ ಎಸೆದ ನಂತರ
  • ಕೈ ತೊಳೆಯುವುದನ್ನು ಎಂದೂ ಹಗುರವಾಗಿ ಪರಿಗಣಿಸಬಾರದು. ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವ ಎಷ್ಟೋ ಜನ ತಮ್ಮ ಕೈ ತೊಳೆದುಕೊಳ್ಳುವುದೇ ಇಲ್ಲ ಅಥವಾ ಸರಿಯಾಗಿ ತೊಳೆದುಕೊಳ್ಳುವುದಿಲ್ಲ ಎಂದು ಅಧ್ಯಯನಗಳು ತೋರಿಸಿವೆ. ಹಾಗಾದರೆ ನಮ್ಮ ಕೈಯನ್ನು ಹೇಗೆ ತೊಳೆಯಬೇಕು?

ಹೇಗೆ ತೊಳೆದುಕೊಳ್ಳಬೇಕು

  • ಶುದ್ಧ ನೀರಿನಲ್ಲಿ ಕೈಯನ್ನು ಒದ್ದೆ ಮಾಡಿಕೊಂಡು ಸೋಪು ಹಚ್ಚಿರಿ. ನೊರೆ ಬರುವವರೆಗೆ ಕೈಯನ್ನು ಚೆನ್ನಾಗಿ ಉಜ್ಜಿರಿ. ಉಗುರುಗಳನ್ನು, ಹೆಬ್ಬೆರಳುಗಳನ್ನು, ಕೈ ಹಿಂಭಾಗವನ್ನು ಮತ್ತು ಬೆರಳುಗಳ ಮಧ್ಯ ಭಾಗವನ್ನೂ ಶುಚಿ ಮಾಡಿಕೊಳ್ಳಿ.
  • ಕನಿಷ್ಠ 20 ಸೆಕೆಂಡುಗಳವರೆಗೆ ನಿಮ್ಮ ಕೈಗಳನ್ನು ಉಜ್ಜುತ್ತಾ ಇರಿ.
  • ನಂತರ ಶುದ್ಧವಾದ ನೀರಿನಲ್ಲಿ ಚೆನ್ನಾಗಿ ಕೈ ತೊಳೆದುಕೊಳ್ಳಿ.
  • ಕೈಯನ್ನು ಶುದ್ಧವಾದ ಬಟ್ಟೆಯಿಂದ ಅಥವಾ ಟಿಶ್ಯೂ ಪೇಪರ್‍ನಿಂದ ಒರೆಸಿಕೊಳ್ಳಿ.
ಈ ಮೇಲಿನ ಹೆಜ್ಜೆಗಳು ಸರಳವಾದರೂ ಅವುಗಳನ್ನು ಪಾಲಿಸುವುದಾದರೆ ಕಾಯಿಲೆಗಳಿಂದ ದೂರವಿದ್ದು ನಮ್ಮ ಪ್ರಾಣವನ್ನು ಕಾಪಾಡಿಕೊಳ್ಳುತ್ತೇವೆ.

Read More

ಗೂಗಲ್ ಸಾಹಸ

ಗೂಗಲ್ ಸಾಹಸ
ಗೂಗಲ್ ಸದಾ ಸಂಶೋಧನೆಯಲ್ಲಿ  ತೊಡಗಿರುವ ಕಂಪನಿ. ತನ್ನ ಸರ್ಚ್ ಇಂಜಿನ್ ಹಾಗೂ ಇಮೇಲ್‍ಗಳನ್ನು ಒಂದಕ್ಕೊಂದು ಪೋಣಿಸುವ ಮೂಲಕ ಸರ್ಚ್ ಪ್ರಕ್ರಿಯೆಯನ್ನು ಗೂಗಲ್ ಮತ್ತಷ್ಟು ಸುಧಾರಿಸಿದೆ. ಯುಟ್ಯೂಬ್‍ನ ಮ್ಯೂಸಿಕ್, ಮೂವೀಸ್ ನಂಥ ಚಾನಲ್ ಗಳನ್ನು ಜನಪ್ರಿಯ ಗೊಳಿಸುವ ಪ್ರಯತ್ನವೂ ನಡೆ ಯಿತು. ಆದರೆ ಇವುಗಳೆಲ್ಲ ಕಂಪನಿ ಆದಾಯ ವೃದ್ದಿಗೆ ಹೆಚ್ಚು ಸಹಾಯಕವೇ  ಹೊರತು ಬಳಕೆದಾರನ ದೃಷ್ಟಿಯಲ್ಲಿ ವಿಶೇಷ ಬದಲಾವಣೆ ತರಲಿಲ್ಲ.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಮೂಲಕ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ ಕ್ಷೇತ್ರದಲ್ಲಿ ಗೂಗಲ್ ಹೊಸ ಆಂಡ್ರಾಯ್ಡ್ ಒಎಸ್ ಜೆಲ್ಲಿ ಬೀನ್ ಬಿಡುಗಡೆ.

1)ಏಸರ್ ನೊಂದಿಗೆ ಹೊಂದಾಣಿಕೆ ಮೂಲಕ ನೆಕ್ಸಸ್ ಟ್ಯಾಬ್ ಬಿಡುಗಡೆ.

2)ಮ್ಯಾಪ್ ಅಪ್ಲಿಕೇಷನ್‍ನಲ್ಲಿ ಕ್ಷಣಕ್ಷಣದ ಟ್ರಾಫಿಕ್ ಮಾಹಿತಿ ದಾಖಲೀಕರಣಕ್ಕೆ ಭಾರತದ ಪ್ರಮುಖ ನಗರಗಳ ಸೇರ್ಪಡೆ.

3)ಆ್ಯಪಲ್‍ನ ನಿರ್ಧಾರದಿಂದ ಐಒಎಸ್6 ನಿಂದ ಯುಟ್ಯೂಬ್ ಹಾಗೂ ಗೂಗಲ್ ಮ್ಯಾಪ್ಸ್ ಹೊರಕ್ಕೆ, ಇತ್ತೀಚೆಗೆ ಮತ್ತೆ ಸೇರ್ಪಡೆ.
Read More