ಗೂಗಲ್ ಸದಾ ಸಂಶೋಧನೆಯಲ್ಲಿ ತೊಡಗಿರುವ ಕಂಪನಿ. ತನ್ನ ಸರ್ಚ್ ಇಂಜಿನ್ ಹಾಗೂ ಇಮೇಲ್‍ಗಳನ್ನು ಒಂದಕ್ಕೊಂದು ಪೋಣಿಸುವ ಮೂಲಕ ಸರ್ಚ್ ಪ್ರಕ್ರಿಯೆಯನ್ನು ಗೂಗಲ್ ಮತ್ತಷ್ಟು ಸುಧಾರಿಸಿದೆ. ಯುಟ್ಯೂಬ್‍ನ ಮ್ಯೂಸಿಕ್, ಮೂವೀಸ್ ನಂಥ ಚಾನಲ್ ಗಳನ್ನು ಜನಪ್ರಿಯ ಗೊಳಿಸುವ ಪ್ರಯತ್ನವೂ ನಡೆ ಯಿತು. ಆದರೆ ಇವುಗಳೆಲ್ಲ ಕಂಪನಿ ಆದಾಯ ವೃದ್ದಿಗೆ ಹೆಚ್ಚು ಸಹಾಯಕವೇ ಹೊರತು ಬಳಕೆದಾರನ ದೃಷ್ಟಿಯಲ್ಲಿ ವಿಶೇಷ ಬದಲಾವಣೆ ತರಲಿಲ್ಲ.ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಮೂಲಕ ಸ್ಮಾರ್ಟ್ ಫೋನ್ ಹಾಗೂ ಟ್ಯಾಬ್ ಕ್ಷೇತ್ರದಲ್ಲಿ ಗೂಗಲ್ ಹೊಸ ಆಂಡ್ರಾಯ್ಡ್ ಒಎಸ್ ಜೆಲ್ಲಿ ಬೀನ್ ಬಿಡುಗಡೆ.
1)ಏಸರ್ ನೊಂದಿಗೆ ಹೊಂದಾಣಿಕೆ ಮೂಲಕ ನೆಕ್ಸಸ್ ಟ್ಯಾಬ್ ಬಿಡುಗಡೆ.
2)ಮ್ಯಾಪ್ ಅಪ್ಲಿಕೇಷನ್‍ನಲ್ಲಿ ಕ್ಷಣಕ್ಷಣದ ಟ್ರಾಫಿಕ್ ಮಾಹಿತಿ ದಾಖಲೀಕರಣಕ್ಕೆ ಭಾರತದ ಪ್ರಮುಖ ನಗರಗಳ ಸೇರ್ಪಡೆ.
3)ಆ್ಯಪಲ್‍ನ ನಿರ್ಧಾರದಿಂದ ಐಒಎಸ್6 ನಿಂದ ಯುಟ್ಯೂಬ್ ಹಾಗೂ ಗೂಗಲ್ ಮ್ಯಾಪ್ಸ್ ಹೊರಕ್ಕೆ, ಇತ್ತೀಚೆಗೆ ಮತ್ತೆ ಸೇರ್ಪಡೆ.