ಮೂಲವ್ಯಾಧಿಗೆ ಮನೆಮದ್ದು


  • ಅಂಜೂರ ಹಾಗೂ ಒಣ ದ್ರಾಕ್ಷಿಗಳನ್ನು ಚೆನ್ನಾಗಿ ತೊಳೆದು, ರಾತ್ರಿ ಒಂದು ಲೋಟ ಶುದ್ದ ಕುಡಿಯುವ ನೀರಿನಲ್ಲಿ ನೆನೆಯಿಟ್ಟು, ಬೆಳಗಿನ ಜಾವ, ಉಬ್ಬಿರುವ ಹಣ್ಣುಗಳನ್ನು ಅದೇ ನೀರಲ್ಲಿ ಕಿವುಚಿ ಸೇವಿಸಬೇಕು. ನೆನಪಿಡಿ ಇದು ಮಧುಮೇಹಿಗಳಿಗೆ ನಿಷೇಧ
  • ಮೂಲಂಗಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆಯ ತೆಳುಪದರವನ್ನು ತೆಗೆದು, ಚಿಕ್ಕದಾಗಿ ಹೆಚ್ಚಿಕೊಂಡು ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಳ್ಳಿರಿ. ಅರ್ಧ ಬಟ್ಟಲಷ್ಟು ಈ ಮೂಲಂಗಿ ತಿರುಳು ರಸವನ್ನು ತೆಗೆದುಕೊಳ್ಳಿ. ಒಂದು ಚಿಟಿಕೆ ಸೈಂಧವ ಲವಣ ಸೇರಿಸಿ, ಅರ್ಧ ಹೋಳು ನಿಂಬೆರಸವನ್ನು ಹಿಂಡಿರಿ. ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಿ ಜಜ್ಜಿಕೊಂಡ ಹಸಿಶುಂಠಿಯನ್ನು ಒಂದು ತೆಳು ಶುಭ್ರಬಟ್ಟೆಯಲ್ಲಿಟ್ಟು ಹಿಂಡಿ, ರಸವನ್ನು ಮೇಲಿನ ಮಿಶ್ರಣಕ್ಕೆ ಸೇರಿಸಿ. ಚೆನ್ನಾಗಿ ಕಲಸಿ, ತಾಜಾ ಇರುವಾಗಲೇ ಸೇವಿಸಿರಿ.
  • ಬೀಟ್ರೂಟ್, ಗಜ್ಜರಿ, ಒಂದಂಗುಲ ಹಸಿ ಶುಂಠಿಯನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಕತ್ತರಿಸಿ ನಂತರ ಸ್ವಲ್ಪ ನೀರಿನೊಂದಿಗೆ ರುಬ್ಬಿಕೊಂಡು ಆ ರಸ ತಾಜಾ ಇರುವಾಗಲೇ ಸೇವಿಸಿ. ಇದು ಮೂಲವ್ಯಾಧಿಯನ್ನು ಕಡಿಮೆ ಮಾಡುತ್ತದೆ, ದೇಹಕ್ಕೆ ಉತ್ತಮ ಪೋಷಕಾಂಶಗಳನ್ನೂ ನೀಡುತ್ತದೆ. 
  • ಒಂದು ಬಟ್ಟಲಲ್ಲಿ 1 ಚಿಟಿಕೆ ಸೈಂಧವ ಲವಣ ತೆಗೆದುಕೊಂಡು ಅದಕ್ಕೆ ಕಾಲು ಚಮಚ ಅಮೃತಬಳ್ಳಿಯ ಮೃದು ಚೂರ್ಣ ಹಾಕಿ, ಕಾಲು ಚಮಚ ಅಳಲೆಕಾಯಿ ಚೂರ್ಣ ಹಾಕಿ, ಇದಕ್ಕೆ ಸಿಹಿಮಜ್ಜಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ತಾಜಾ ಇರುವಾಗಲೇ ಸೇವಿಸಿ. ಬೊಜ್ಜು, ಮೂಲವ್ಯಾಧಿ ಹಾಗೂ ಅತಿಸಾರದ ನಿವಾರಣೆಗೆ ಸಹಾಯಕಾರಿ.
  • ಲೋಳೆಸರದ ತಿರುಳಿನ ರಸವನ್ನು ಮೂಲವ್ಯಾಧಿಯ
  • ಮೊಳಕೆಗೆ ಅಥವಾ ಗಾಯಕ್ಕೆ ನೇರವಾಗಿ ಹಚ್ಚಬೇಕು.
  • ಆಗ ತುರಿಕೆ, ನೋವು, ಉರಿ ಕಡಿಮೆಯಾಗಿ, ಮೂಲವ್ಯಾಧಿ ಹತೋಟಿಗೆ ಬರುತ್ತದೆ.
  • ಇಂದಿನ ಆಧುನಿಕ ಯುಗದಲ್ಲಿ ಕೆಲಸದ ಒತ್ತಡಕ್ಕೆ ಮಣಿದು ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯುವುದನ್ನೇ ಕಡಿಮೆ ಮಾಡಿದ್ದೇವೆ ಇದರಿಂದ ಅನೇಕ ಭಾದೆಗಳು ಕಾಡಲು ಆರಂಭಿಸಿವೆ. ಅದರಲ್ಲಿ ಮೂಲವ್ಯಾಧಿಯೂ ಒಂದು ಇದರಿಂದ ನಿವಾರಣೆ ಕಾಣಬೇಕಾದರೆ,  ಬೆಳಗ್ಗೆ ಎದ್ದ ಕೂಡಲೇ ಒಂದು ಲೀಟರ್‍ನಷ್ಟು ನೀರನ್ನು ಗಟಗಟನೆ ಕುಡಿಯಬೇಕು. ಹಲ್ಲುಜ್ಜುವ ಮೊದಲೇ  ಮಾಡಿದರೂ ಒಳ್ಳೆಯದು. ಇದರಿಂದ ಮೂಲವ್ಯಾಧಿ ಶಮನವಾಗುತ್ತದೆ.
  • ಬೀಟ್ರೂಟ್ ಹಾಗೂ ಪುದಿನವನ್ನು ತೆಗೆದುಕೊಳ್ಳಿ, ಬೀಟ್ರೂಟ್ ಸಿಪ್ಪೆ ತೆಗೆದು, ಚಿಕ್ಕದಾಗಿ ಕತ್ತರಿಸಿಕೊಂಡು ರುಬ್ಬಿಕೊಳ್ಳಿ. ಒಂದು ಬಟ್ಟಲಿಗೆ ಚಿಟಿಕೆ ಸೈಂಧವ ಲವಣ ಹಾಕಿಕೊಳ್ಳಿ.  1 ಚಮಚ ರುಬ್ಬಿಕೊಂಡ ಪುದಿನ ಹಾಕಿರಿ. ಸ್ವಲ್ಪ  ನೀರನ್ನು ಸೇರಿಸಿ. ಈಗ ರುಬ್ಬಿದ ಬೀಟ್ರೂಟನ್ನು 1  ಚಮಚ ಹಾಕಿ ಚೆನ್ನಾಗಿ ಮಿಶ್ರಣ ಮಾಡಿರಿ. ನಂತರ 1  ಚಮಚ ಜೇನುತುಪ್ಪ ಸೇರಿಸಿ, ತಾಜಾ ಇರುವಾಗಲೇ ಸೇವಿಸಿ. ಇದು ದೇಹಕ್ಕೆ ನಾರಿನಂಶ,  ಕಬ್ಬಿಣಾಂಶ ನೀಡಿ ರಕ್ತಹೀನತೆಯನ್ನು  ಕಡಿಮೆ ಮಾಡುತ್ತದೆ ಹಾಗೂ ಮಲಬದ್ಧತೆ, ಮೂಲವ್ಯಾಧಿಯನ್ನು ಕಡಿಮೆ ಮಾಡುತ್ತದೆ.



Related Posts
Previous
« Prev Post