ಆಂಡ್ರೆ ಎಂಬ ಹೆಂಗಸು ಕಳೆದು ಹೋದ ತನ್ನ ಗಂಡನನ್ನು ಹುಡುಕುವುದೇ ಈ ಗೇಮ್. ಹೆಸರು,`ಲೆಟರ್ಸ್ ಫ್ರಮ್ ನೋವೇರ್'. ಸತ್ತು ಬಿದ್ದ ಪೋಸ್ಟ್ ಮ್ಯಾನ್ ಬಳಿ ಇದ್ದ ಲೆಟರ್‍ಗಳನ್ನು ಸಂಗ್ರಹಿಸಿ
ಅದರ ಮೂಲಕ ಗಂಡನ ಪತ್ತೆಗೆ ಹೊರಡುತ್ತಾಳೆ ಅಂಡ್ರೆ. ಹುಡುಕಾಟದ ವೇಳೆ ಎದುರಾಗುವ
ಸವಾಲುಗಳನ್ನು ಪರಿಹರಿಸುತ್ತಾ ಮುಂದೆ ಸಾಗುತ್ತಾ ಹೋಗುತ್ತಾಳೆ. ಭಯ ಹುಟ್ಟಿಸುವ,
ರೋಮಾಂಚಕಾರಿಯಾದ, ನಿಗೂಢವಾದ ಅನುಭವ ನೀಡುವ ಈ ಗೇಮ್ ಇದು. 11 ವಿಶಿಷ್ಟವಾದ
ಸಾಹಸ ಪ್ರಧಾನವಾದ ಸೆಟ್ಟಿಂಗ್‍ಗಳು, 50 ಆಕರ್ಷಕ ಸೆಟ್ಟಿಂಗ್‍ಗಳು ಗೇಮ್‍ನ ಉದ್ದಕ್ಕೂ ಇವೆ.
ಈ ಗೇಮ್‍ನಲ್ಲಿ 11 ಮಿನಿ ಗೇಮ್‍ಗಳೂ ಇವೆ. ಒಂದೊಂದು ಪತ್ರವೂ ಒಂದೊಂದು ಸುಳಿವು
ನೀಡುತ್ತಾ ಆಂಡ್ರೆಯನ್ನು ಗಂಡನ ಹತ್ತಿರ ಕರೆದೊಯ್ಯುತ್ತವೆ. ಆದರೆ ಆ ಸುಳಿವನ್ನು ಬಿಡಿಸಿ ದಾರಿ
ಕಂಡುಕೊಳ್ಳುವುದೇ ಗೇಮ್‍ನಲ್ಲಿರುವ ಮಜ. ಗೇಮ್ ಬಗ್ಗೆ ಕುತೂಹಲವಿದೆಯಾ? ಇಲ್ಲಿಂದ ಡೌನ್‍ಲೋಡ್ ಮಾಡಿಕೊಳ್ಳಿ. http://bit.ly/NbKgaj