ಸಾಂಕ್ರಾಮಿಕ ರೋಗವಾದ ಟೈಫಾಯಿಡ್ಗೆ ವಿಷಮಶೀತಜ್ವರ ಎಂದೂ ಕರೆಯುತ್ತಾರೆ. ವೈದ್ಯಶಾಸದಲ್ಲಿ ಸಲ್ಮೊನೆಲ್ಲ ಟೈಫ ಎಂದು ಕರೆಯಲ್ಪಡುವ ರೋಗಾಣುವೇ ಇದಕ್ಕೆ ಕಾರಣ. ಆಹಾರ ಅಥವಾ ನೀರಿನ ಮೂಲಕ ಈ ರೋಗಾಣುಗಳು ರಕ್ತದಲ್ಲಿ ಸೇರುತ್ತವೆ. ಜ್ವರ, ಕೆಮ್ಮು, ತಲೆನೋವು ಮತ್ತು ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು - ಇವು ಈ ರೋಗದ ಲಕ್ಷಣಗಳು. ಹಸಿವು ಕೂಡ ಕಡಿಮೆಯಾಗುತ್ತದೆ. ಜ್ವರ 40 ಡಿಗ್ರಿಯವರೆಗೂ ಏರಬಹುದು. ಸುಮಾರು 30 ದಿನಗಳಲ್ಲಿ ದೇಹದ ಉಷ್ಣಾಂಶ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮಲಿನಗೊಂಡ ನೀರು ಅಥವಾ ಹಾಲಿನಿಂದ ಟೈಫಾಯಿಡ್ ಹರಡುತ್ತದೆ. ಹಸಿ ಆಹಾರವೂ ಟೈಫಾಯಿಡ್ ರೋಗಾಣುಗಳಿಂದ ದೂಷಿತವಾಗಬಹುದು. ನೊಣಗಳೂ ಈ ರೋಗಾಣುಗಳನ್ನು ಒಯ್ಯಬಹುದು. ಹಿಂದಿನ ಕಾಲದಲ್ಲಿ ರೋಗ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 1948ರ ನಂತರ ಈ ರೋಗಕ್ಕಾಗಿ ನಿರ್ದಿಷ್ಟ ಆ್ಯಂಟಿ ಬಯಾಟಿಕ್ ಕಂಡುಹಿಡಿಯಲಾಯಿತು. ಈ ಹಿಂದೆ ಟೈಫಾಯಿಡ್ ನಿಂದ ಪ್ರತಿವರ್ಷ ಸಾವಿರಾರು ಜನ ಸಾಯುತ್ತಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಪ್ರಗತಿಯಿಂದಾಗಿ ಈ ರೋಗವನ್ನು ಬಹುಮಟ್ಟಿಗೆ ನಿಯಂತ್ರಿಸಲಾಗಿದೆ. ಈ ರೋಗ ನಿವಾರಣೆಗೆ ನೈರ್ಮಲ್ಯ ಬಹಳ ಮುಖ್ಯವಾಗಿದೆ.ಟೈಫಾಯಿಡ್ ಎಂದರೇನು ?
ಸಾಂಕ್ರಾಮಿಕ ರೋಗವಾದ ಟೈಫಾಯಿಡ್ಗೆ ವಿಷಮಶೀತಜ್ವರ ಎಂದೂ ಕರೆಯುತ್ತಾರೆ. ವೈದ್ಯಶಾಸದಲ್ಲಿ ಸಲ್ಮೊನೆಲ್ಲ ಟೈಫ ಎಂದು ಕರೆಯಲ್ಪಡುವ ರೋಗಾಣುವೇ ಇದಕ್ಕೆ ಕಾರಣ. ಆಹಾರ ಅಥವಾ ನೀರಿನ ಮೂಲಕ ಈ ರೋಗಾಣುಗಳು ರಕ್ತದಲ್ಲಿ ಸೇರುತ್ತವೆ. ಜ್ವರ, ಕೆಮ್ಮು, ತಲೆನೋವು ಮತ್ತು ಬಿಳಿ ರಕ್ತಕಣಗಳ ಸಂಖ್ಯೆ ಕಡಿಮೆಯಾಗುವುದು - ಇವು ಈ ರೋಗದ ಲಕ್ಷಣಗಳು. ಹಸಿವು ಕೂಡ ಕಡಿಮೆಯಾಗುತ್ತದೆ. ಜ್ವರ 40 ಡಿಗ್ರಿಯವರೆಗೂ ಏರಬಹುದು. ಸುಮಾರು 30 ದಿನಗಳಲ್ಲಿ ದೇಹದ ಉಷ್ಣಾಂಶ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಮಲಿನಗೊಂಡ ನೀರು ಅಥವಾ ಹಾಲಿನಿಂದ ಟೈಫಾಯಿಡ್ ಹರಡುತ್ತದೆ. ಹಸಿ ಆಹಾರವೂ ಟೈಫಾಯಿಡ್ ರೋಗಾಣುಗಳಿಂದ ದೂಷಿತವಾಗಬಹುದು. ನೊಣಗಳೂ ಈ ರೋಗಾಣುಗಳನ್ನು ಒಯ್ಯಬಹುದು. ಹಿಂದಿನ ಕಾಲದಲ್ಲಿ ರೋಗ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. 1948ರ ನಂತರ ಈ ರೋಗಕ್ಕಾಗಿ ನಿರ್ದಿಷ್ಟ ಆ್ಯಂಟಿ ಬಯಾಟಿಕ್ ಕಂಡುಹಿಡಿಯಲಾಯಿತು. ಈ ಹಿಂದೆ ಟೈಫಾಯಿಡ್ ನಿಂದ ಪ್ರತಿವರ್ಷ ಸಾವಿರಾರು ಜನ ಸಾಯುತ್ತಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಪ್ರಗತಿಯಿಂದಾಗಿ ಈ ರೋಗವನ್ನು ಬಹುಮಟ್ಟಿಗೆ ನಿಯಂತ್ರಿಸಲಾಗಿದೆ. ಈ ರೋಗ ನಿವಾರಣೆಗೆ ನೈರ್ಮಲ್ಯ ಬಹಳ ಮುಖ್ಯವಾಗಿದೆ.