ನಾವು ಸೇವಿಸುವ ಆಹಾರ ಕೆಲವೊಮ್ಮೆ ವಿಷವಾಗಿ ಮಾರ್ಪಡುವುದರಿಂದ ಆರೋಗ್ಯಕ್ಕೆ ಹಾನಿಕರವಾಗುತ್ತದೆ. ಆಹಾರವನ್ನು ಸರಿಯಾಗಿ ತಯಾರಿಸದೆ ಅಥವಾ ಅದನ್ನು ಶುದ್ಧವಾಗಿ ಶೇಖರಿಸದೆ ಹೋದರೆ ಅದು ವಿಷವಾಗುವ ಸಾಧ್ಯತೆ ಇದೆ. ಈ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಜನರು ಅಸ್ವಸ್ಥರಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. ಹೆಚ್ಚಿನವರು ಈ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳುತ್ತಾರೆ. ಆದರೆ ಇನ್ನು ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈ ಅಪಾಯದಿಂದ ನೀವು ದೂರವಿರಲು ಏನು ಮಾಡಬಹುದು?- ತರಕಾರಿಗಳನ್ನು ಔಷಧಿ, ಗೊಬ್ಬರ ಉಪಯೋಗಿಸಿ ಬೆಳೆಸುತ್ತಾರೆ. ಆದ್ದರಿಂದ ನೀವು ತರಕಾರಿಗಳನ್ನು ಉಪಯೋಗಿಸುವಾಗ ಅವುಗಳನ್ನು ಚೆನ್ನಾಗಿ ತೊಳೆಯಿರಿ.
- ಆಹಾರ ತಯಾರಿಸುವ ಮುಂಚೆ ತರಕಾರಿ ಹೆಚ್ಚುವ ಮಣೆ, ಪಾತ್ರೆ, ತಟ್ಟೆ ಮತ್ತು ನಿಮ್ಮ ಕೈಗಳಿಗೆ ಸೋಪು ಹಚ್ಚಿ ಬಿಸಿ ನೀರಿನಿಂದ ಚೆನ್ನಾಗಿ ತೊಳೆಯಿರಿ.
- ಮೊಟ್ಟೆ, ಮಾಂಸ, ಮೀನನ್ನು ಇಟ್ಟ ಪಾತ್ರೆ ಅಥವಾ ಸ್ಥಳವನ್ನು ತೊಳೆದು ಶುದ್ಧ ಮಾಡಿದ ನಂತರವೇ ಆಹಾರ ಪದಾರ್ಥಗಳನ್ನು ಇಡಿ.
- ಆಹಾರವನ್ನು ಚೆನ್ನಾಗಿ ಬೇಯಿಸಿ, ಬೇಗನೇ ಕೆಡುವಂಥ ಆಹಾರವನ್ನು ತಕ್ಷಣ ಬಳಸದೇ ಇದ್ದಲ್ಲಿ ಅದನ್ನು ಫ್ರಿಜ್ನಲ್ಲಿ ಇಡಿ.