ದಂಪತಿಗಳು ಮಾಡುವ ಸಾಮಾನ್ಯ ತಪ್ಪುಗಳು

ಪರಸ್ಪರ ಪ್ರೇರೇಪಿಸದೇ ಇರುವುದು

ನೀವು ಯಾವಾಗಲೂ ನಿಮ್ಮ ಸಂಗಾತಿಯನ್ನು ಹೊಸದೇನಾದರೋ ಮಾಡುವಂತೆ ಪ್ರೋತ್ಸಾಹಿಸುತ್ತಿರಿ. ಪರಸ್ಪರ ಪ್ರೇರೇಪಿಸುವುದನ್ನು ಎಂದೂ ನಿಲ್ಲಿಸಬೇಡಿ. ನಿಮ್ಮ ಸಂಬಂಧವನ್ನು ಬಲಪಡಿಸುವಲ್ಲಿ ಇದು ಅತ್ಯಂತ ಮುಖ್ಯ. ನೀವು ನೀಡಿದ ಪ್ರೇರಣೆ ಮತ್ತು ಪ್ರೋತ್ಸಾಹಕ್ಕೆ ಬದಲಾಗಿ ನಿಮ್ಮ ಸಂಗಾತಿ ನಿಮ್ಮನ್ನು ಮತ್ತಷ್ಟು ಹೆಚ್ಚು ಗೌರವಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. 

ಗ್ಯಾಜೆಟ್‌ಗಳ ಜೊತೆ ಸಮಯ ಕಳೆಯುವುದು

ಗ್ಯಾಜೆಟ್ ಬಳಸುವುದು ಈ ದಿನಗಳಲ್ಲಿ ಅತ್ಯಂತ ಅನಿವಾರ್ಯ. ಆದರೆ ಅವುಗಳು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಆವರಿಸದಂತೆ ನೋಡಿಕೊಳ್ಳಿ. ಎಲ್ಲಾ ಸಮಯವನ್ನು ನೀವು ನಿಮ್ಮ ನೆಚ್ಚಿನ ಗ್ಯಾಜೆಟ್ ಜೊತೆ ಕಳೆದರೆ, ನಿಮ್ಮ ಸಂಗಾತಿ ಅಪರಿಚಿತರಾಗಿ ಉಳಿದುಬಿಡುತ್ತಾರೆ. ಪ್ರತಿ ಕ್ಷಣವೂ ಮುಖ್ಯ ಎನ್ನುವಂತೆ ಪರಸ್ಪರದ ಜೊತೆ ಉತ್ತಮ ಸಮಯ ಕಳೆಯಿರಿ. ಪರಸ್ಪರರತ್ತ ಸಂಪೂರ್ಣ ಗಮನ ನೀಡಲು ಲ್ಯಾಪ್‌ಟಾಪ್ ಮತ್ತು ಫೋನ್ ಸ್ವಿಚ್ ಆಫ್ ಮಾಡಿ. 

ಜಗಳ ಪರಿಹರಿಸಿಕೊಳ್ಳದೆ ಮಲಗುವುದು

ಜಗಳ ಎಷ್ಟೇ ದೊಡ್ಡದು ಅಥವಾ ಸಣ್ಣದಾಗಿರಲಿ, ಮಲಗುವ ಮುನ್ನ ಅದನ್ನು ಪರಿಹರಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ, ಒಟ್ಟಿಗೆ ಒಂದು ಪರಿಹಾರ ಯೋಚಿಸುವ ಮೂಲಕ ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿ. 

ಈ ಸರಳ ಸಲಹೆಗಳನ್ನು ಅನುಸರಿಸಿದರೆ ನಿಮ್ಮ ಪ್ರೀತಿ ಎಂದೂ ಮಸುಕಾಗದು. 

ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ

ಇತರರೊಂದಿಗೆ ನಿಮ್ಮ ವೈಯಕ್ತಿಕ ಜೀವನವನ್ನು ಹೋಲಿಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೆಲವರು ಇತರರೊಂದಿಗೆ ತಮ್ಮ ಸಂಬಳ ಅಥವಾ ವೈಯಕ್ತಿಕ ಜೀವನವನ್ನು ಹೋಲಿಸಿ ನೋಡುವ ಪ್ರವೃತ್ತಿ ಹೊಂದಿರುತ್ತಾರೆ. ಟೀಕಿಸುವ ಮತ್ತು ಹೋಲಿಸುವ ಬದಲು ನಿಮ್ಮ ಸಂಬಂಧವನ್ನು ಉತ್ತಮಗೊಳಿಸಲು ಯತ್ನಿಸಿ. .

Related Posts
Latest